ದೇಶ

2019ರ ನಂತರ ಇದೇ ಮೊದಲ ಬಾರಿಗೆ ಬಿಎಸ್ಎಫ್ ಮತ್ತು ಪಾಕ್ ಸೈನಿಕರಿಂದ ಸಿಹಿ ತಿನಿಸು ವಿನಿಮಯ!

Vishwanath S

ನವದೆಹಲಿ: 2019ರ ಬಳಿಕ ಇದೇ ಮೊದಲ ಬಾರಿಗೆ ಬಕ್ರಿದ್ ಪ್ರಯುಕ್ತ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮತ್ತು ಪಾಕಿಸ್ತಾನ ಸೈನಿಕರು ಬುಧವಾರ ಗಡಿಯ ವಿವಿಧ ಸ್ಥಳಗಳಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು.

2019ರ ಆಗಸ್ಟ್ 5ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್ಟಿಕಲ್ 370 ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಬಳಿಕ ಪಾಕಿಸ್ತಾನ ಏಕಪಕ್ಷೀಯವಾಗಿ ವಿನಿಮಯ ಪ್ರಕ್ರಿಯೆಯನ್ನು ನಿಲ್ಲಿಸಿತ್ತು.

ಪಾಕಿಸ್ತಾನದ ವಾಗಾ ಗಡಿಯ ಮುಂಭಾಗದಲ್ಲಿರುವ ಪಂಜಾಬ್‌ನ ಅಮೃತಸರ ಜಿಲ್ಲೆಯ ಜೆಸಿಪಿ(ಜಂಟಿ ಚೆಕ್ ಪೋಸ್ಟ್) ಅತ್ತಾರಿಯಲ್ಲಿ ಈದ್ ಸಂದರ್ಭದಲ್ಲಿ ಬಿಎಸ್ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವೆ ಸಿಹಿತಿಂಡಿಗಳ ವಿನಿಮಯ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಇದೇ ವೇಳೆ ರಾಜಸ್ಥಾನ ಮುಂಭಾಗದಲ್ಲಿ ಉಭಯ ಪಡೆಗಳ ನಡುವೆ ಇದೇ ರೀತಿಯ ಸಿಹಿತಿಂಡಿ ವಿನಿಮಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

370ನೇ ವಿಧಿ ರದ್ದುಪಡಿಸಿದ ನಂತರ ಮೊದಲ ಬಾರಿಗೆ ಉಭಯ ಪಡೆಗಳ ನಡುವೆ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡಿವೆ. ಏಕೆಂದರೆ ಪಾಕಿಸ್ತಾನದ ಕಡೆಯವರು ಈ ಪದ್ಧತಿಯನ್ನು ಮುಂದುವರಿಸಲು ನಿರಾಕರಿಸಿದರು ಎಂದು ಹೇಳಿದ್ದಾರೆ. 

ಇನ್ನು ಬಿಎಸ್ಎಫ್ ವಕ್ತಾರರು, ಕಳೆದ ವರ್ಷ ಕೋವಿಡ್ 19ನಿಂದಾಗಿ ಏಕಾಏಕಿ ಈ ಪದ್ಧತಿಯನ್ನು ಅಮಾನತುಗೊಳಿಸಲಾಗಿತ್ತು ಎಂದು ಹೇಳಿದರು.

SCROLL FOR NEXT