ದೇಶ

ಪೆಗಾಸಸ್ ಗೂಢಚರ್ಯೆ ವಾಟರ್ ಗೇಟ್ ಗಿಂತಲೂ ಕೆಟ್ಟದಾಗಿದೆ: ಮಮತಾ ಬ್ಯಾನರ್ಜಿ 

Srinivas Rao BV

ನವದೆಹಲಿ: ಪೆಗಾಸಸ್ ಸ್ಪೈವೇರ್ ಬಳಸಿ ಪತ್ರಕರ್ತರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಾಜಕೀಯ ನಾಯಕರ ಮೇಲಿನ ಮೇಲಿನ ಗೂಢಚರ್ಯೆ ವಾಟರ್ ಗೇಟ್ ಹಗರಣಕ್ಕಿಂತಲೂ ಕೆಟ್ಟದಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ವಾಟರ್ ಗೇಟ್ ಹಗರಣ ಅಮೆರಿಕಾದಲ್ಲಿ ನಿಕ್ಸನ್ ಅಧ್ಯಕ್ಷೀಯ ಅವಧಿಯಲ್ಲಿ ನಡೆದ ಹಗರಣವಾಗಿದೆ. ದೇಶದಲ್ಲಿ ಸೂಪರ್ ಎಮರ್ಜೆನ್ಸಿಯನ್ನು ಹೇರುವುದಕ್ಕಾಗಿ ಮೊಬೈಲ್ ಫೋನ್ ಗಳ ಮೇಲೆ ಸ್ಪೈವೇರ್ ಮೂಲಕ ಗೂಢಚರ್ಯೆ ನಡೆಸಲಾಗುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. 

ನಿಷ್ಪಕ್ಷಪಾತ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ರಾಜಕೀಯಗೊಳಿಸಿವೆ ಎಂದೂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಿಜೆಪಿ ನಾಯಕತ್ವಕ್ಕೆ ತನ್ನದೇ ಅಧಿಕಾರಿಗಳು ಸಚಿವರ ಮೇಲೆಯೂ ನಂಬಿಕೆ ಇಲ್ಲ. ಹಲವು ಮಂದಿ ಆರ್ ಎಸ್ ಎಸ್ ನವರ ಫೋನ್ ಗಳನ್ನೂ ಟ್ಯಾಪ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

SCROLL FOR NEXT