ದೇಶ

ಕೇಂದ್ರದ ನಿಧಿಗಾಗಿ ಭೀಕ್ಷೆ ಬೇಡಲು ಪ್ರಧಾನಿ ಮೋದಿ ಭೇಟಿ ಬಯಸುತ್ತಿರುವ ಮಮತಾ- ದಿಲೀಪ್ ಘೋಷ್

Nagaraja AB

ಕೊಲ್ಕತ್ತಾ: ಕೇಂದ್ರ ನೀಡುವ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ, ಮಡಿಸಿದ ಕೈಗಳಿಂದ ನಿಧಿಗಾಗಿ ಬೇಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಭಾನುವಾರ ಹೇಳಿದ್ದಾರೆ. 

ಆದಾಗ್ಯೂ, ಅವರ ಹೇಳಿಕೆಗೆ ತಿರುಗೇಟು ನೀಡಿರುವ ಆಡಳಿತಾರೂಢ ಪಕ್ಷ, ಒಕ್ಕೂಟ ವ್ಯವಸ್ಥೆ ಬಗ್ಗೆ ಘೋಷ್ ಉತ್ತಮವಾಗಿ ತಿಳಿಯಬೇಕಾಗಿದೆ. ಈ ವ್ಯವಸ್ಥೆಯಡಿ ರಾಜ್ಯದ ಮುಖ್ಯಸ್ಥರು ಯಾವಾಗಬೇಕಾದರು ಪ್ರಧಾನಿಯನ್ನು ಭೇಟಿಯಾಗಬಹುದಾಗಿದೆ ಎಂದು ಹೇಳಿದೆ.

ಮಮತಾ ಬ್ಯಾನರ್ಜಿ ದೆಹಲಿ ಭೇಟಿ ನಿಗದಿ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್, ಟಿಎಂಸಿ ಸದಸ್ಯರು ರಾಜ್ಯದ ಖಜಾನೆಯಿಂದ ಹಣ ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದರು.ಕೇಂದ್ರದಿಂದ ಹಂಚಿಕೆಯಾದ ನಿಧಿಯನ್ನು ಮಮತಾ ಬ್ಯಾನರ್ಜಿ ದುರುಪಯೋಗಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇದೀಗ ಆರ್ಥಿಕ ದಿವಾಳಿ ಸ್ಥಿತಿ ತಲುಪಿರುವಾಗ ಮಡಿಸಿದ ಕೈಗಳೊಂದಿಗೆ ಹೆಚ್ಚಿನ ಅನುದಾನ ಕೇಳಲು ಪ್ರಧಾನಿ ಮೋದಿ ಭೇಟಿಯಾಗಲು ಮಮತಾ ಬಯಸಿದ್ದಾರೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಸರ್ಕಾರದ ವ್ಯಾಪಕ ಭ್ರಷ್ಟಚಾರದಿಂದ ಪಶ್ಚಿಮ ಬಂಗಾಳ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಟಿಎಂಸಿಯಲ್ಲಿ ಹೆಚ್ಚುತ್ತಿರುವ ಬಣವಾದವನ್ನು ಗಮನಿಸಿದರೆ, 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯವನ್ನು ಉತ್ತಮವಾಗಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ದೀದಿ ಅರಿತಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT