ದೇಶ

ತೆಲಂಗಾಣ: ಯುನೆಸ್ಕೊ ವಿಶ್ವ ಪಾರಂಪರಿಕತಾಣಗಳ ಪಟ್ಟಿಗೆ ಪಾಲಂಪೇಟ್‌ ನ ರಾಮಪ್ಪ ದೇವಸ್ಥಾನ ಸೇರ್ಪಡೆ

Srinivasamurthy VN

ನವದೆಹಲಿ: ಭಾರತದ ಮತ್ತೊಂದು ತಾಣ ಯುನೆಸ್ಕೊ ವಿಶ್ವ ಪಾರಂಪರಿಕತಾಣಗಳ ಪಟ್ಟಿಗೆಯಾಗಿದ್ದು, ಜಾಗತಿಕ ಮನ್ನಣೆ ದೊರೆತಿದೆ.

ಈ ಬಗ್ಗೆ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್‌ ರೆಡ್ಡಿ ಅವರು ಮಾಹಿತಿ ನೀಡಿದ್ದು, 'ತೆಲಂಗಾಣದ ವಾರಂಗಲ್‌ ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿರುವ ರಾಮಪ್ಪ ದೇವಸ್ಥಾನಕ್ಕೆ ‘ಯುನೆಸ್ಕೊ ವಿಶ್ವ ಪಾರಂಪರಿಕ ತಾಣ’ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಅವರು, ತೆಲಂಗಾಣದ ವಾರಂಗಲ್ ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿರುವ ರಾಮಪ್ಪ ದೇವಸ್ಥಾನಕ್ಕೆ ‘ಯುನೆಸ್ಕೊ ವಿಶ್ವ ಪಾರಂಪರಿಕ ತಾಣ’ ಗೌರವ ನೀಡಲಾಗಿದೆ. ಈ ವಿಷಯ ಹಂಚಿಕೊಳ್ಳಲು ಸಂತಸ ಎನಿಸುತ್ತದೆ. ಈ ನಿಟ್ಟಿನಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ  ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಪರವಾಗಿ, ಅದರಲ್ಲೂ ತೆಲಂಗಾಣ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ‘ಕಾಕತೀಯ ರಾಜವಂಶದ ಕಲಾ ಶ್ರೀಮಂತಿಕೆಯನ್ನು ರಾಮಪ್ಪ ದೇವಸ್ಥಾನ ಬಿಂಬಿಸುತ್ತದೆ. ಈ ದೇವಸ್ಥಾನಕ್ಕೆ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣ ಗೌರವ ಲಭಿಸಿದ್ದಕ್ಕಾಗಿ ತೆಲಂಗಾಣ ರಾಜ್ಯದ ಜನರನ್ನು ಅಭಿನಂದಿಸುವೆ. ಪ್ರತಿಯೊಬ್ಬರೂ ಈ  ದೇವಸ್ಥಾನಕ್ಕೆ ಭೇಟಿ ನೀಡಿ, ಅದರ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

13ನೇ ಶತಮಾನದ ಈ ದೇವಸ್ಥಾನ ತನ್ನ ವಾಸ್ತುಶಿಲ್ಪದಿಂದಾಗಿ ಗಮನ ಸೆಳೆಯುತ್ತದೆ. ಈ ದೇವಸ್ಥಾನವನ್ನು ನಿರ್ಮಿಸಿರುವ ಶಿಲ್ಪಿ ರಾಮಪ್ಪ ಅವರ ಹೆಸರನ್ನೇ ದೇಗುಲಕ್ಕೆ ಇಡಲಾಗಿದೆ. ಈ ಬಾರಿ ಕೇಂದ್ರ ಸರ್ಕಾರ ಈ ದೇವಸ್ಥಾನದ ಹೆಸರಿರುವ ಪ್ರಸ್ತಾವನೆಯನ್ನು ಮಾತ್ರ ವಿಶ್ವ ಪಾರಂಪರಿಕ ತಾಣ ಗೌರವಕ್ಕಾಗಿ  ಸಲ್ಲಿಸಿತ್ತು.

SCROLL FOR NEXT