ಅಮೆರಿಕ ರಾಜ್ಯ ಕಾರ್ಯದರ್ಶಿ ಬ್ಲಿಂಕೆನ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ 
ದೇಶ

ಬ್ಲಿಂಕೆನ್- ಜೈಶಂಕರ್ ನಡುವಿನ ಚರ್ಚೆಯಲ್ಲಿ ಅಪ್ಘಾನಿಸ್ತಾನ ಸಮಸ್ಯೆ ಕುರಿತ ಚರ್ಚೆ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನಡುವೆ ಬುಧವಾರ ನಡೆದ ಮಾತುಕತೆ ವೇಳೆಯಲ್ಲಿ ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ಹೆಚ್ಚಿನ ಚರ್ಚೆ ನಡೆದಿದೆ.

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನಡುವೆ ಬುಧವಾರ ನಡೆದ ಮಾತುಕತೆ ವೇಳೆಯಲ್ಲಿ ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ಹೆಚ್ಚಿನ ಚರ್ಚೆ ನಡೆದಿದೆ.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ಲಿಂಕೆನ್,  ಹಿಂಸಾಚಾರ ಮತ್ತು  ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಮೂಲಕ ಅಪ್ಘಾನಿಸ್ತಾನದ ಭವಿಷ್ಯವನ್ನು ಬರೆಯಲಾಗದು ಎಂದರು.

ನಗರ ಕೇಂದ್ರಗಳಲ್ಲಿ ತಾಲಿಬಾನ್ ಕ್ರಮಗಳಿಂದ ತೀವ್ರ ರೀತಿಯ ತೊಂದರೆಯಾಗುತ್ತಿದೆ. ಅಪ್ಘಾನ್ ಸರ್ಕಾರ ಮತ್ತು ಅಪ್ಘಾನ್ ಪಡೆಗಳಿಗೆ ಬೆಂಬಲ ನೀಡುತ್ತೇವೆ. ತಾಲಿಬಾನ್ ಮುಖಂಡ ಪ್ರಪಂಚದಾದ್ಯಂತ ಪ್ರಯಾಣಿಸಲು ಬಯಸುತ್ತಾನೆ ಮತ್ತು ಅದನ್ನು ಮಾಡಲು ಒಂದೇ ಒಂದು ಮಾರ್ಗವಿದೆ. ತಾಲಿಬಾನ್ ತನ್ನ ಉದ್ದೇಶ ಸಾಧಿಸಲು ತನ್ನ ಪಡೆಗಳಿಂದ ದೇಶವನ್ನು ಪಡೆಯುವುದು ಸರಿಯಾದ ಮಾರ್ಗವಲ್ಲ ಎಂದು ಸಭೆಯ ನಂತರ ಜೈಶಂಕರ್ ಹೇಳಿದರು.

ಅಪ್ಘಾನಿಸ್ತಾನದಿಂದ ಅಮೆರಿಕಾ ಪಡೆಗಳನ್ನು ಹಿಂಪಡೆದಿರುವ ಮಧ್ಯೆ, ಕ್ರಿಯೆಯು ಪರಿಣಾಮಗಳನ್ನು ಹೊಂದಿರುತ್ತದೆ ಮತ್ತು ಅವುಗಳನ್ನು ಎದುರಿಸಬೇಕಾಗುತ್ತದೆ ಎಂದು ಜೈಶಂಕರ್ ಹೇಳಿದರು. ಯುದ್ಧ ಪೀಡಿತ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ವ್ಯಾಪಕ ಒಮ್ಮತವಿದೆ ಎಂದ ಸಚಿವರು, ಪಾಕಿಸ್ತಾನದ ಬಗ್ಗೆ ಕೆಲ ಅಪವಾದಗಳಿವೆ ಎಂದು ಸ್ಪಷ್ಪಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT