ದೇಶ

ದೆಹಲಿಗೆ ಭೇಟಿ ನೀಡಿದ ಮಾರನೇ ದಿನ, ಶಶಿಕಲಾಗೆ 'ನೋ ಎಂಟ್ರಿ' ಎಂದ ಒಪಿಎಸ್

Lingaraj Badiger

ಚೆನ್ನೈ: ಪಕ್ಷಕ್ಕೆ ಉಭಯ ನಾಯಕತ್ವ ಮುಂದುವರಿಯುತ್ತದೆ ಮತ್ತು ಯಾರೂ ಪಕ್ಷವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಸಂಯೋಜಕ ಒ ಪನ್ನೀರ್ ಸೆಲ್ವಂ ಅವರು ಬುಧವಾರ ಹೇಳಿದ್ದಾರೆ.

ವಿ.ಕೆ.ಶಶಿಕಲಾ ಅವರು ಇತ್ತೀಚೆಗೆ ರಾಜಕೀಯಕ್ಕೆ ಮರು ಪ್ರವೇಶಿಸುವ ಮತ್ತು ಪಕ್ಷವನ್ನು ಮುನ್ನಡೆಸುವುದಾಗಿ ಪ್ರತಿಪಾದಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪನ್ನೀರ್ ಸೆಲ್ವಂ ಅವರು, "ಕಳೆದ ನಾಲ್ಕೂವರೆ ವರ್ಷಗಳಿಂದ ನಾನು ಮತ್ತು ಪಳನಿಸ್ವಾಮಿ ಪಕ್ಷದ ಸಂಯೋಜಕರಾಗಿ ಮತ್ತು ಜಂಟಿ ಸಂಯೋಜಕರಾಗಿ ಮುನ್ನಡೆಸುತ್ತಿದ್ದೇವೆ - ಅಂದರೆ, ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಖಾತರಿಪಡಿಸಿದ್ದೇವೆ, ಅದರಲ್ಲಿ ಒಂದು ನಿರ್ದಿಷ್ಟ ಕುಟುಂಬ ಅಥವಾ ವ್ಯಕ್ತಿಯು ಪಕ್ಷದ ವ್ಯವಹಾರಗಳಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ ಎಂದರು.

ವಿಧಾನಸಭಾ ಚುನಾವಣೆಗೆ ಮುನ್ನ ಶಶಿಕಲಾ ಅವರ ಕಡೆಗೆ ವಾಲುತ್ತಿದ್ದ ಪನ್ನೀರ್ ಸೆಲ್ವಂ ಅವರು ಇದುವರೆಗೂ ಮೌನ ವಹಿಸಿದ್ದರು. ನಿನ್ನೆಯಷ್ಟೆ ದೆಹಲಿ ಭೇಟಿ ನೀಡಿದ್ದ ಪನ್ನೀರ್ ಸೆಲ್ವಂ ಅವರು ಇಂದು ಮೌನ ಮುರಿದಿದ್ದು, ಶಶಿಕಲಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಸರ್ವೋಚ್ಚ ಅಧಿಕಾರ ಹೊಂದಿರುವ ಎಐಎಡಿಎಂಕೆ ಜನರಲ್ ಕೌನ್ಸಿಲ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಶಶಿಕಲಾ ಅವರನ್ನು ಆಯ್ಕೆ ಮಾಡಬಹುದು ಎಂಬ ವದಂತಿಯನ್ನು ತಳ್ಳಿಹಾಕಿದ ಪನ್ನೀರ್ ಸೆಲ್ವಂ,"ಜನರಲ್ ಕೌನ್ಸಿಲ್ ಪಕ್ಷದ ಸರ್ವೋಚ್ಚ ಸಂಸ್ಥೆ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಅದೇ ಜನರಲ್. ಕೌನ್ಸಿಲ್ ಅವಳನ್ನು ಆ ಹುದ್ದೆಯಿಂದ ತೆಗೆದುಹಾಕಿದೆ" ಎಂದರು.

SCROLL FOR NEXT