ಜೀತೇಂದ್ರ ಸಿಂಗ್ 
ದೇಶ

2023ರ ಆರಂಭದಲ್ಲಿ ಇಸ್ರೋ-ನಾಸಾ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ- ಜೀತೇಂದ್ರ ಸಿಂಗ್

ಸುಧಾರಿತ ರೇಡಾರ್ ಇಮೇಜಿಂಗ್ ಬಳಸಿಕೊಂಡು ಜಾಗತಿಕ ಭೂ ಮೇಲ್ಮೈ ಬದಲಾವಣೆಗಳ ಮಾಪನ ಮಾಡುವ ಗುರಿ ಹೊಂದಿರುವ ನಾಸಾ ಮತ್ತು ಇಸ್ರೋ ಸಹಭಾಗಿತ್ವದ ನಿಸಾರ್ ಉಪಗ್ರಹವನ್ನು  (ನಾಸಾ- ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ) 2023ರ ಆರಂಭದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಭೂ ವಿಜ್ಞಾನ ಸಚಿವ ಜೀತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.

ನವದೆಹಲಿ: ಸುಧಾರಿತ ರೇಡಾರ್ ಇಮೇಜಿಂಗ್ ಬಳಸಿಕೊಂಡು ಜಾಗತಿಕ ಭೂ ಮೇಲ್ಮೈ ಬದಲಾವಣೆಗಳ ಮಾಪನ ಮಾಡುವ ಗುರಿ ಹೊಂದಿರುವ ನಾಸಾ ಮತ್ತು ಇಸ್ರೋ ಸಹಭಾಗಿತ್ವದ ನಿಸಾರ್ ಉಪಗ್ರಹವನ್ನು  (ನಾಸಾ- ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ) 2023ರ ಆರಂಭದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಜೀತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹ ಇನ್ನೂ ಉಡಾವಣೆ ಮಾಡಿಲ್ಲ, 2023ರ ಆರಂಭದಲ್ಲಿ ಉಡಾವಣೆ ಮಾಡಲಾಗುವುದು ಎಂದರು. ವಿಶ್ವದಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳ ಗುರುತಿಸುವಿಕೆ, ಭೂಕಂಪನದಂತಹ ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯುವುದು ಈ ಯೋಜನೆಯ ಉದ್ದೇಶ ಎಂದು ಹೇಳಿದರು.

ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಅರಿಯುವುದರ ಜೊತೆಗೆ ಭೂಮಿ ಮತ್ತು ಕರಾವಳಿ ಪ್ರದೇಶದ ಪ್ರಕ್ರಿಯೆಗಳ ಸಂಗ್ರಹಕ್ಕೆ ಈ ಉಪಗ್ರಹ ನೆರವಾಗಲಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

GST 2.0: ಶಾಂಪುವಿನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ ಮತ್ತು ದುಬಾರಿ?

ಉತ್ತರ ಭಾರತದ ಹಲವೆಡೆ ಭಾರಿ ಪ್ರವಾಹ, ಭೂ ಕುಸಿತಕ್ಕೆ ಇದೇ ಕಾರಣ! ಕೇಂದ್ರ, ರಾಜ್ಯಗಳಿಂದ ಉತ್ತರ ಬಯಸಿದ ಸುಪ್ರೀಂಕೋರ್ಟ್!

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರಂದು ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!

SCROLL FOR NEXT