ದೇಶ

ಪೆಗಾಸಸ್ ಗೂಢಚರ್ಯೆ: ಸುಪ್ರೀಂ ಕೋರ್ಟ್ ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ

Srinivas Rao BV

ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಕೆಗೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. 

ಹಿರಿಯ ಪತ್ರಕರ್ತ ಎನ್ ರಾಮ್, ಶಶಿ ಕುಮಾರ್ ಈ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ಅಡ್ವೊಕೇಟ್ ಕಪಿಲ್ ಸಿಬಲ್,  ನಾಗರಿಕರು, ವಿಪಕ್ಷದಲ್ಲಿರುವ ರಾಜಕಾರಣಿಗಳು, ಪತ್ರಕರ್ತರು, ಕೋರ್ಟ್ ಸಿಬ್ಬಂದಿಗಳ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಕಣ್ಗಾವಲಿಡಲಾಗಿದೆ. 

ಭಾರತವಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಈ ವಿಷಯ ಚರ್ಚೆಯಾಗುತ್ತಿದೆ. ಈ ಪ್ರಕರಣ ತಕ್ಷಣವೇ ವಿಚಾರಣೆಗೆ ಬರಬೇಕಿದೆ ಎಂದು ಸಿಬಲ್ ಎನ್ ವಿ ರಮಣ ಹಾಗೂ ನ್ಯಾ. ಸೂರ್ಯಕಾಂತ್ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದಾರೆ. 

ವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆ ನಡೆಸಬಹುದು ಎಂದು ಹೇಳಿದೆ. ಸೇನಾ ಶ್ರೇಣಿಯ ಸ್ಪೈವೇರ್ ಗಳಿಂದ ಹಲವು ಮೂಲಭೂತ ಹಕ್ಕುಗಳು ಸಂಕುಚಿತಗೊಂಡಿವೆ. ಅಷ್ಟೇ ಅಲ್ಲದೇ ಸ್ವಾಯತ್ತ ಸಂಸ್ಥೆಗಳ ಮೇಲಿನ ದಾಳಿಯೂ ಇದಾಗಿದ್ದು ಅವುಗಳನ್ನು ಅಸ್ಥಿರಗೊಳಿಸುವ ಯತ್ನವೂ ಇದಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. 

ಕೇಂದ್ರ ಸರ್ಕಾರದ ಯಾವುದೇ ಏಜೆನ್ಸಿಗಳು ಪೆಗಾಸಸ್ ಗೆ ಲೈಸೆನ್ಸ್ ಪಡೆದಿವೆಯಾ? ಈಗ ಆರೋಪ ಕೇಳಿಬಂದಿರುವಂತೆ ಕಣ್ಗಾವಲಿಡಲು ಅಥವಾ ನೇರ ಅಥವಾ ಪರೋಕ್ಷವಾಗಿ ಬಳಕೆ ಮಾಡಿವೆಯಾ? ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಬಹಿರಂಗಪಡಿಸುವುದಕ್ಕೆ ನಿರ್ದೇಶನ ನೀಡಲು ಕೋರ್ಟ್ ಗೆ ಮನವಿ ಮಾಡಲಾಗಿದೆ.

SCROLL FOR NEXT