ದೇಶ

ರಾಜ್ಯಸಭೆಯ ಮೊದಲ ಎರಡು ವಾರಗಳಲ್ಲಿ 50 ಗಂಟೆಗಳ ಪೈಕಿ 40 ಗಂಟೆಗಳ ಕಾರ್ಯಾವಧಿ ಪೋಲು

Srinivas Rao BV

ನವದೆಹಲಿ: ರಾಜ್ಯಸಭೆಯ ಮೊದಲ ಎರಡು ವಾರಗಳಲ್ಲಿ 50 ಗಂಟೆಗಳ ಪೈಕಿ 40 ಗಂಟೆಗಳಷ್ಟು ಕಾರ್ಯಾವಧಿ ಪೋಲಾಗಿದೆ.

ಸಂಸತ್ ನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ರಾಜ್ಯಸಭೆಯ ಕಾರ್ಯಾಲಯ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ,  ಮೊದಲ ಎರಡು ವಾರಗಳಲ್ಲಿ 40-50 ಗಂಟೆಗಳಷ್ಟು ಕಾರ್ಯಾವಧಿ ಪೋಲಾಗಿದೆ.

ಹಾಲಿ ಕಲಾಪದ ಎರಡನೇ ವಾರದಲ್ಲಿ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಉತ್ಪಾದಕತೆ ಶೇ.13.70 ರಷ್ಟಕ್ಕೆ ಕುಸಿದಿದೆ. ಮೊದಲ ವಾರದಲ್ಲಿ ಈ ಪ್ರಮಾಣ ಶೇ.32.20 ರಷ್ಟಿತ್ತು.

50 ಗಂಟೆಗಳ ಕಾರ್ಯಾವಧಿಯ ಪೈಕಿ 39 ಗಂಟೆ 52 ನಿಮಿಷಗಳು ಪ್ರತಿಭಟನೆಯಲ್ಲೇ ವ್ಯರ್ಥವಾಗಿದೆ. ನಿಗದಿಯಾಗಿದ್ದ ಸಮಯಕ್ಕಿಂತಲೂ 1 ಗಂಟೆ 12 ನಿಮಿಷಗಳಿಗಿಂತಲೂ ಹೆಚ್ಚಾಗಿ ಕಲಾಪ ನಡೆದಿದೆ. ಇದಕ್ಕೆ ಹೋಲಿಕೆ ಮಾಡಿದಲ್ಲಿ ಉತ್ಪಾದಕತೆ ಮತ್ತಷ್ಟು ಕಡಿಮೆಯಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯಸಭೆಯ ಕಾರ್ಯಾಲಯ ದಿನ ನಿತ್ಯದ ಬುಲೆಟಿನ್ ಗಳನ್ನು ಪ್ರಸಾರ ಮಾಡುತ್ತಿದ್ದು, ಮೇಲ್ಮನೆಯಲ್ಲಿ ಪ್ರಸ್ತಾಪಿಸಲಾಗದ ವಿಷಯಗಳ ಬಗ್ಗೆಯೂ ಮಾಹಿತಿ ನೀಡುತ್ತಿದೆ.

SCROLL FOR NEXT