ದೇಶ

ಪಶ್ಚಿಮ ಬಂಗಾಳ: ಆಲಾಪನ್ ಬಂದ್ಯೋಪಾಧ್ಯಾಯ್ ಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಗೃಹ ಸಚಿವಾಲಯದಿಂದ ನೊಟೀಸ್

Srinivas Rao BV

ನವದೆಹಲಿ: ಪಶ್ಚಿಮ ಬಂಗಾಳದ ನಿವೃತ್ತ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ'ಗೆ ಕೇಂದ್ರ ಗೃಹ ಸಚಿವಾಲಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಿದೆ. 

ಕೇಂದ್ರ ಸರ್ಕಾರದ ನಿರ್ದೇಶನವನ್ನು ಪಾಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸೋಮವಾರದಂದು (ಮೆ.31) ರಂದು ನಿವೃತ್ತಿಗೂ ಕೆಲವೇ ಗಂಟೆಗಳ ಮೊದಲು ಬಂದ್ಯೋಪಾಧ್ಯಾಯಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ. 

ಆಲಾಪನ್ ಬಂದ್ಯೋಪಾಧ್ಯಾಯ ಅವರ ನಡೆ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 51-B ನ ಉಲ್ಲಂಘನೆ ಎಂದು ಪರಿಗಣಿಸಲಾಗಿದ್ದು, ಮೂರು ದಿನಗಳಲ್ಲಿ ಉತ್ತರಿಸುವಂತೆ ಸಚಿವಾಲಯ ಹೇಳಿದೆ. 

ಬಂದ್ಯೋಪಾಧ್ಯಾಯ ಅವರ ಸೇವಾ ಅವಧಿಯನ್ನು ಮೂರು ತಿಂಗಳ ವರೆಗೆ ವಿಸ್ತರಣೆ ಮಾಡಲಾಗಿತ್ತು. ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಂದ್ಯೋಪಾಧ್ಯಾಯ ಅವರ ರಾಜೀನಾಮೆಯನ್ನು ಘೋಷಿಸಿ ಅವರನ್ನು ಸರ್ಕಾರಕ್ಕೆ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು.

SCROLL FOR NEXT