ದೇಶ

ಆಲಪನ್ ಬಂದ್ಯೋಪಾಧ್ಯಾಯ ಮುಗಿದ ಅಧ್ಯಾಯ; ಬಂಗಾಳ ಸರ್ಕಾರ ಎಂದಿಗೂ ಅವರ ಬೆನ್ನಿಗೆ ನಿಲ್ಲುತ್ತದೆ: ಮಮತಾ ಬ್ಯಾನರ್ಜಿ

Vishwanath S

ಕೋಲ್ಕತಾ: ಆಲಪನ್ ಬಂದ್ಯೋಪಾಧ್ಯಾಯ ವಿವಾದ ಈಗ ಮುಗಿದ ಅಧ್ಯಾಯ. ಕೇಂದ್ರ ಸರ್ಕಾರಕ್ಕೆ ಸೇರದ ಅವರ ಜೊತೆಗೆ ಸರ್ಕಾರ ನಿಲ್ಲುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಆಲಪನ್ ಬಂದ್ಯೋಪಾಧ್ಯಾಯ ಅಧ್ಯಾಯವು ಈಗ ಮುಗಿದಿದೆ. ಆಲಪನ್ ಬಂದ್ಯೋಪಾಧ್ಯಾಯ ಅವರಿಗೆ ಏನೇ ಆದರೂ ಅವರೊಂದಿಗೆ ಪಶ್ಚಿಮ ಬಂಗಾಳ ಸರ್ಕಾರ ನಿಲ್ಲುತ್ತದೆ ಎಂದು ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು. 

ಮೇ 31ಕ್ಕೆ ಬಂದ್ಯೋಪಾಧ್ಯಾಯ ನಿವೃತ್ತರಾಗಲು ನಿರ್ಧರಿಸಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರಿಂದ ರಾಜ್ಯವು ಇತ್ತೀಚೆಗೆ ಅವರ ಅಧಿಕಾರಾವಧಿಯನ್ನು ಮೂರು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರವನ್ನು ಕೋರಿತ್ತು. ಇದಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಸರ್ಕಾರ ನಾಲ್ಕು ದಿನಗಳ ಬಳಿಕ ನಿವೃತ್ತಿಗೆ ಆದೇಶಿಸಿತ್ತು. ಆದರೆ ಇದಕ್ಕೆ ಬಂಗಾಳ ಸರ್ಕಾರ ಒಪ್ಪದ ಕಾರಣ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ ಜಂಜಾಟಕ್ಕೆ ಕಾರಣವಾಗಿತ್ತು. 

ಕೇಂದ್ರ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ನಡುವಿನ ಹಗ್ಗಜಗ್ಗಾಟದ ನಡುವೆ ರಾಜ್ಯ ಸರ್ಕಾರ ಆಲಪನ್ ಅವರು ಸಿಎಂ ಮುಖ್ಯ ಸಲಹೆಗಾರರಾಗಿ ನೇಮಿಸಿತು. ಹೀಗಾಗಿ ಕೇಂದ್ರ ಗೃಹ ಸಚಿಲವಾಯ ವಿಪತ್ತು ನಿರ್ವಹಣಾ ಕಾಯ್ದೆಯ ಕಟ್ಟುನಿಟ್ಟಿನ ನಿಬಂಧನೆಯಡಿಯಲ್ಲಿ ಬಂದ್ಯೋಪಾಧ್ಯಾಯ  ಮೇಲೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. 

ಇದು ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಬಂದ್ಯೋಪಾಧ್ಯಾಯ ಈಗಾಗಲೇ ಮುಖ್ಯ ಸಲಹೆಗಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ರಾಜ್ಯ ನೀರಾವರಿ ಇಲಾಖೆಯ ಬುಧವಾರದ ಸಭೆಯಲ್ಲಿ ಉಪಸ್ಥಿತರಿದ್ದರು.

SCROLL FOR NEXT