ದೇಶ

ಪಂಚಾಯಿತಿ ಚುನಾವಣೆಯಲ್ಲಿ  ಪಕ್ಷ ವಿರೋಧಿ ಚಟುವಟಿಕೆ: ಇಬ್ಬರು ಬಿಎಸ್ ಪಿ ಶಾಸಕರ ಉಚ್ಛಾಟನೆ

Shilpa D

ಲಕ್ನೋ: ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದ ಮೇಲೆ ಇಬ್ಬರು ಬಿಎಸ್ ಪಿ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಲಾಲ್ ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್ಬರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ವರ್ಮಾ ಅವರನ್ನು ಶಾಸಕಾಂಗ ಪಕ್ಷದ ಮುಖಂಡ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಶಾ ಆಲಂ ಅಲಿಯಾಸ್ ಗುಡ್ಡು ಜಮಾಲಿ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿ ನೇಮಕ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಲಾಲ್ಜಿ ವರ್ಮಾ ಅವರು ಕತೇರಿ ಸ್ಥಾನದಿಂದ ಬಿಎಸ್ಪಿ ಶಾಸಕರಾಗಿದ್ದರೆ, ಶ್ರೀ ರಾಜ್ಭರ್ ಅವರು ರಾಜ್ಯದ ಅಂಬೇಡ್ಕರ್ ನಗರ ಜಿಲ್ಲೆಯ ಅಕ್ಬರ್ಪುರ ಸ್ಥಾನದ ಶಾಸಕರಾಗಿದ್ದಾರೆ. ಹೊಸದಾಗಿ ನೇಮಕಗೊಂಡ ಶಾಸಕಾಂಗ ಪಕ್ಷದ ನಾಯಕ ಶಾ ಆಲಂ ಅವರು ಅಜಮ್‌ಘರ್ ಜಿಲ್ಲೆಯ ಮುಬಾರಕ್‌ಪುರ ಕ್ಷೇತ್ರದ ಶಾಸಕರಾಗಿದ್ದಾರೆ.
 

SCROLL FOR NEXT