ದೇಶ

ಸರ್ಕಾರದ ಹೊಸ ಐಟಿ ನಿಯಮಾವಳಿಗಳನ್ನು ಅನುಸರಿಸಲು ಕಾಲಾವಕಾಶ ಕೇಳಿದ ಟ್ವಿಟರ್

Srinivas Rao BV

ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಅನುಸರಿಸುವುದಕ್ಕೆ ಹೆಚ್ಚಿನ ಕಾಲಾವಕಾಶವನ್ನು ಕೇಳಿದೆ.

ಮೂಲಗಳ ಪ್ರಕಾರ ಹೊಸ ನಿಯಮಗಳನ್ನು ಪಾಲನೆ ಮಾಡುವುದಕ್ಕೆ ಟ್ವಿಟರ್ ಬಯಸುತ್ತಿದೆ. ಆದರೆ ಭಾರತದಲ್ಲಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ಹೊಸ ನಿಯಮಗಳನ್ನು ಪಾಲನೆ ಮಾಡುವುದಕ್ಕೆ ಹೆಚ್ಚಿನ ಕಾಲಾವಕಾಶ ಬೇಕೆಂದು ಮನವಿ ಮಾಡಿ ಕೇಂದ್ರ ಸರ್ಕಾರಕ್ಕೆ ಟ್ವಿಟರ್ ಮನವಿ ಮಾಡಿರುವುದು ತಿಳಿದುಬಂದಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಟ್ವಿಟರ್ ಪತ್ರ ಬರೆದಿದ್ದು, ಹೊಸ ನಿಯಮಗಳನ್ನು ಪಾಲನೆ ಮಾಡುವುದಕ್ಕೆ ಟ್ವಿಟರ್ ಉದ್ದೇಶಿಸುತ್ತಿದೆ. ಆದರೆ ಕೋವಿಡ್-19 ಕಾರಣಗಳಿಂದಾಗಿ ಅದು ಸಾಧ್ಯಾವಗುತ್ತಿಲ್ಲ ಎಂದು ಹೇಳಿದೆ.

ಹೊಸ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಟ್ವಿಟರ್ ಗೆ ಸರ್ಕಾರ ತೀಕ್ಷ್ಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಟ್ವಿಟರ್ ಸರ್ಕಾರದಿಂದ ಹೆಚ್ಚಿನ ಕಾಲಾವಕಾಶ ಕೋರಿದೆ. ಈ ಸಂಬಂಧ ಟ್ವಿಟರ್ ವಕ್ತಾರರನ್ನು ಸಂಪರ್ಕಿಸಿದಾಗ, "ಭಾರತಕ್ಕೆ ಹಾಗೂ ಸೇವೆಯಲ್ಲಿ ನಡೆಯುವ ಸಾರ್ವಜನಿಕ ಸಂವಹನಕ್ಕೆ ಟ್ವಿಟರ್ ಬದ್ಧವಾಗಿರಲಿದೆ. 

ಹೊಸ ನಿಯಮಗಳ ಪಾಲನೆಗೆ ಸಂಬಂಧಿಸಿದ ಪ್ರಗತಿಯನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಭಾರತ ಸರ್ಕಾರದೊಂದಿಗಿನ ರಚನಾತ್ಮಕ ಮಾತುಕತೆ ಮುಂದುವರೆಸಲಿದ್ದೇವೆ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.

SCROLL FOR NEXT