ಪ್ರಧಾನಿ ನರೇಂದ್ರ ಮೋದಿ 
ದೇಶ

ಗಡ್ಡ ತೆಗೆಯಲು ಪ್ರಧಾನಿಗೆ 100 ರೂಪಾಯಿ ಕಳಿಸಿದ ಟೀ ಮಾರಾಟಗಾರ: ಮೋದಿಗೆ ಆತ ಕಳಿಸಿದ ಸಂದೇಶ ಇದು...

ಮಹಾರಾಷ್ಟ್ರದ ಬಾರಾಮತಿಯ ಟೀ ಮಾರಾಟಗಾರ ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯುವುದಕ್ಕೆ 100 ರೂಪಾಯಿ ಕಳಿಸಿಕೊಟ್ಟಿದ್ದು, ಪತ್ರವನ್ನು ಬರೆದಿದ್ದಾರೆ. 

ಮುಂಬೈ: ಮಹಾರಾಷ್ಟ್ರದ ಬಾರಾಮತಿಯ ಟೀ ಮಾರಾಟಗಾರ ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯುವುದಕ್ಕೆ 100 ರೂಪಾಯಿ ಕಳಿಸಿಕೊಟ್ಟಿದ್ದು, ಪತ್ರವನ್ನು ಬರೆದಿದ್ದಾರೆ. 

ಕಳೆದ ಒಂದೂವರೆ ವರ್ಷದಲ್ಲಿ ಕೊರೋನಾ, ಲಾಕ್ ಡೌನ್ ನಿಂದ ಅಸಂಘಟಿತ ವಲಯ ತೀವ್ರವಾಗಿ ಕುಸಿತ ಕಂಡಿದೆ. ಇದರಿಂದ ತೀವ್ರವಾಗಿ ಬೇಸತ್ತ ಟೀ ವ್ಯಾಪಾರಿ ಅನಿಲ್ ಮೋರೆ, ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಗಡ್ಡ ಬೆಳೆಸಿದ್ದಾರೆ. ಆದರೆ ಏನನ್ನಾದರೂ ಬೆಳೆಸುವುದಾದರೆ ದೇಶದ ಜನತೆಗೆ ಉದ್ಯೋಗಾವಕಾಶಗಳನ್ನು ಬೆಳೆಸಿ, ಲಸಿಕೆಯನ್ನು ಹೆಚ್ಚಿಸಿ, ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಏರಿಕೆ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. 

ಕಳೆದ 2 ಲಾಕ್ ಡೌನ್ ಗಳಿಂದ ಕಂಗೆಟ್ಟಿರುವ ಜನತೆಯ ಸಮಸ್ಯೆಗಳು ನಿವಾರಣೆಯಾಗುವುದನ್ನು ಪ್ರಧಾನಿ ಮೋದಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಟೀ ಮಾರಾಟ ಮಾಡುವ ಅನಿಲ್ ಮೋರೆ ಅಭಿಪ್ರಾಯಪಟ್ಟಿದ್ದಾರೆ. 

ಪ್ರಧಾನಿಗಳ ಹುದ್ದೆ ದೇಶದ ಅತ್ಯುನ್ನತ ಹುದ್ದೆಯಾಗಿದೆ. ಪ್ರಧಾನಿಗಳ ಬಗ್ಗೆ ಅವರ ಆಡಳಿತದ ಬಗ್ಗೆ ಗೌರವವಿದೆ. ನನ್ನ ಉಳಿತಾಯದ ಹಣದಿಂದ 100 ರೂಪಾಯಿಗಳನ್ನು ನಾನು ಅವರಿಗೆ ಗಡ್ಡ ತೆಗೆಸಿಕೊಳ್ಳುವುದಕ್ಕಾಗಿ ಕಳಿಸುತ್ತಿದ್ದೇನೆ. ಅವರು ಅತ್ಯುನ್ನತ ನಾಯಕ ಅವರಿಗೆ ಅವಮಾನ ಮಾಡುವುದು ನನ್ನ ಉದ್ದೇಶವಲ್ಲ. ದೇಶದ ಬಡ ಜನತೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆಯುವುದಕ್ಕಾಗಿ ಈ ರೀತಿ ಮಾಡಿದ್ದೇನೆ" ಎಂದು ಅನಿಲ್ ಮೋರೆ ತಿಳಿಸಿದ್ದಾರೆ. 

ಕೋವಿಡ್-19 ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವವರಿಗೆ 5 ಲಕ್ಷ ರೂಪಾಯಿ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ 30,000 ರೂಪಾಯಿಗಳನ್ನು ನೀಡುವುದಕ್ಕೆ ಪ್ರಧಾನಿಗಳಿಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದೇನೆ ಎಂದು ಅನಿಲ್ ಮೋರೆ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

SCROLL FOR NEXT