ಭಾರತ-ಚೀನಾ ಸೇನೆ 
ದೇಶ

ಬಿಕ್ಕಟ್ಟುಗಳನ್ನು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳಲು ಭಾರತ-ಚೀನಾ ಒಪ್ಪಿಗೆ 

ಗಡಿ ಭಾಗದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಇನ್ನು ಮುಂದಿನ ದಿನಗಳಲ್ಲಿ ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಭಾರತ-ಚೀನಾ ಪರಸ್ಪರ ಒಪ್ಪಿಗೆ ಸೂಚಿಸಿವೆ. 

ನವದೆಹಲಿ: ಗಡಿ ಭಾಗದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಇನ್ನು ಮುಂದಿನ ದಿನಗಳಲ್ಲಿ ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಭಾರತ-ಚೀನಾ ಪರಸ್ಪರ ಒಪ್ಪಿಗೆ ಸೂಚಿಸಿವೆ. 
 
ಈಶಾನ್ಯ ಲಡಾಖ್ ನಲ್ಲಿ ಕಳೆದ ವರ್ಷ ಜೂ.15 ರಂದು ನಡೆದಿದ್ದ ಘರ್ಷಣೆ, ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ಸೇನೆಗಳು ಮಾತುಕತೆಯಲ್ಲಿ ತೊಡಗಿವೆ. ಈ ಪೈಕಿ ಸೇನಾ ಹಿಂತೆಗೆತದಿಂದ ಎಲ್ಎಸಿಯಲ್ಲಿ  ಪರಿಸ್ಥಿತಿ ಒಂದಷ್ಟು ತಿಳಿಗೊಂಡಿರುವಂತಿದ್ದು, ಮುಂದಿನ ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಗಳ ಬದಲಾಗಿ ವಿಭಾಗೀಯ ಕಮಾಂಡರ್ ಗಳೇ ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಿದ್ದಾರೆ ಹಾಗೂ ನಿರ್ಣಯಗಳು ಈ ಮಟ್ಟದಲ್ಲಿ ಚರ್ಚಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋಗ್ರಾ, ಹಾಟ್ ಸ್ಪ್ರಿಂಗ್ ಗಳಲ್ಲಿನ ಬಿಕ್ಕಟುಗಳಿಗೆ ಸಂಬಂಧಿಸಿದ ನಿರ್ಣಯ, ಮಾತುಕತೆಗಳನ್ನು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿಯೇ ನಡೆಸಬಹುದೆಂದು ಚೀನಾ ಭಾವಿಸಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾತುಕತೆಗಳು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿಯೇ ನಡೆಯಲಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಮುಂದಿನ ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಗಳ ಮಾತುಕತೆಯ ಅಗತ್ಯ ಬಂದಲ್ಲಿ ಮಾತ್ರ ಆ ಮಟ್ಟದ ಮಾತುಕತೆಗಳು ನಡೆಯಲಿವೆ.

ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಸೇನಾಧಿಕಾರಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

ಗಲ್ವಾನ್ ಘರ್ಷಣೆಗೆ ಸಂಬಂಧಿಸಿದಂತೆ ವರ್ಕಿಂಗ್ ಮೆಕಾನಿಸಮ್ ಫಾರ್ ಕನ್ಸಲ್ಟೇಷನ್- ಕೋ-ಆರ್ಡಿನೇಷನ್ ಆನ್ ಇಂಡಿಯಾ-ಚೀನಾ ಬಾರ್ಡರ್ ಅಫೇರ್ಸ್ (ಡಬ್ಲ್ಯುಎಂಸಿಸಿ) ಅಡಿಯಲ್ಲಿ  ಈ ವರೆಗೂ 21 ಸುತ್ತಿನ ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆದಿದ್ದು, ಭಾರತೀಯ XIV ಕಾರ್ಪ್ಸ್ ಕಮಾಂಡರ್ ಗಳು ಹಾಗೂ ಪಿಎಲ್ಎ ಕಮಾಂಡರ್ ಆಫ್ ಸೌತ್ ಜಿಂಗ್ಜಿಯಾಂಗ್ ಸೇನಾ ಜಿಲ್ಲೆಯ ನಡುವೆ 11 ಸುತ್ತಿನ ಮಾತುಕತೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ