ದೇಶ

ದೇಣಿಗೆ ಹಣ ದುರುಪಯೋಗ ಭಕ್ತರ ನಂಬಿಕೆಗೆ ಮಾಡಿದ ದ್ರೋಹ: ಅಯೋಧ್ಯಾ ಭೂ ಹಗರಣದ ಬಗ್ಗೆ ಪ್ರಿಯಾಂಕಾ ವಾದ್ರಾ ಕಿಡಿ

Vishwanath S

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ವಿರುದ್ಧ ಭೂಮಿ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ಕಿಡಿಕಾರಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಭಕ್ತರು ದೇಣಿಗೆ ದುರುಪಯೋಗಪಡಿಸಿಕೊಳ್ಳುವುದು ಪಾಪ ಮತ್ತು ಅವರ ನಂಬಿಕೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಕೋಟ್ಯಂತರ ಜನರು ನಂಬಿಕೆ ಮತ್ತು ಭಕ್ತಿಯಿಂದ ದೇವರ ಪಾದಗಳಿಗೆ ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಆ ದೇಣಿಗೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಅನ್ಯಾಯ. ಪಾಪ ಮತ್ತು ಅವರ ನಂಬಿಕೆಗೆ ಮಾಡಿದ ಅವಮಾನ" ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ. 

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ಆವರಣಕ್ಕೆ ತಾಗಿಕೊಂಡಿರುವ ಒಂದು ತುಂಡು ಭೂಮಿಯನ್ನು ದುಬಾರಿ ಬೆಲೆಗೆ ಖರೀದಿಸಿದ್ದಾರೆ ಎಂದು ಸಮಾಜವಾದಿ ಪಕ್ಷ ಮತ್ತು ಎಎಪಿ ಆರೋಪಿಸಿದ್ದರು. 

ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸರ್ಕಾರದ ಮಾಜಿ ಸಚಿವ ಪವನ್ ಪಾಂಡೆ ಅವರು 2 ಕೋಟಿ ರೂ. ಬೆಲೆಯ ಭೂಮಿಯನ್ನು 18.5 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. 

ಈ ಆರೋಪವನ್ನು ಚಂಪತ್ ರಾಯ್ ಬಲವಾಗಿ ನಿರಾಕರಿಸಿದರು. ರಾಯ್ ಅವರ ಆರೋಪವನ್ನು ನಿರಾಕರಿಸಿದ ಟ್ವೀಟ್ ಅನ್ನು ಟ್ಯಾಗ್ ಮಾಡಿ, ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ 'ಭಗವಂತ ರಾಮ, ಈ ರೀತಿಯ ದಿನಗಳು ಯಾವುವು? ನಿಮ್ಮ ಹೆಸರಿನಲ್ಲಿ ದೇಣಿಗೆ ತೆಗೆದುಕೊಳ್ಳುವ ಮೂಲಕ ಹಗರಣಗಳು ನಡೆಯುತ್ತಿವೆ. ನಾಚಿಕೆಯಿಲ್ಲದ ದರೋಡೆಕೋರರು ರಾವಣನಂತಹ ದುರಹಂಕಾರ ಮತ್ತು ನಂಬಿಕೆಯನ್ನು ಮಾರುತ್ತಿದ್ದಾರೆ. 2 ಕೋಟಿ ರೂ.ಗೆ ಖರೀದಿಸಿದ ಭೂಮಿಯನ್ನು 10 ನಿಮಿಷಗಳ ನಂತರ 'ರಾಮ್ ಜನ್ಮಭೂಮಿ'ಗೆ 18.50 ಕೋಟಿ ರೂ.ಗೆ ಹೇಗೆ ಮಾರಾಟ ಮಾಡಲಾಯಿತು ಎಂದು ಪ್ರಶ್ನಿಸಿದರು. ಇದನ್ನು ಕೇಳಿದಾಗ ಅನಿಸುತ್ತದೆ ರಾವಣನು ಎಲ್ಲೆಡೆ ಇದ್ದಾನೆ!' ಎಂದು ಸುರ್ಜೆವಾಲಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

SCROLL FOR NEXT