ದೇಶ

#metoo: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಶಿವಶಂಕರ ಬಾಬಾ ಬಂಧನ

Vishwanath S

ಚೆನ್ನೈ: ಲೈಂಗಿಕ ಕಿರುಕುಳ ಹಾಗೂ ದುರ್ನಡತೆ ಆರೋಪಗಳ ಮೇಲೆ ಸ್ವಯಂ ಘೋಷಿತ ದೇವಮಾನವ ಹಾಗೂ ನಗರ ಹೊರವಲಯದ ವಸತಿ ಶಾಲೆಯ ಸಂಸ್ಥಾಪಕ ಶಿವಶಂಕರ ಬಾಬಾ ಎಂಬ ವ್ಯಕ್ತಿಯನ್ನು ಪೊಲೀಸರು ದೆಹಲಿ ಸಮೀಪ ಬುಧವಾರ ಬಂಧಿಸಿದ್ದಾರೆ.

ಆರೋಪಿ ಬಾಬಾನ ಪತ್ತೆಗಾಗಿ ದೆಹಲಿಗೆ ತೆರಳಿದ್ದ ಸಿಬಿ-ಸಿಐಡಿ ವಿಭಾಗದ ವಿಶೇಷ ಪೊಲೀಸರ ತಂಡ ರಾಷ್ಟ್ರ ರಾಜಧಾನಿಯ ಘಾಜಿಯಾಬಾದ್‌ ನಲ್ಲಿ ಬಂಧಿಸಿದೆ. ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದುಕೊಂಡ ನಂತರ ವಿಚಾರಣೆ ನಡೆಸಲು ಬಾಬಾ ನನ್ನು ಚೆನ್ನೈ ಗೆ ಕರೆ ತರಲಾಗುತ್ತಿದೆ.

ಲೈಂಗಿಕ ಕಿರುಕುಳ ದೂರು ಸಂಬಂಧ ಹಲವು ವಿದ್ಯಾರ್ಥಿಗಳು ನೀಡಿದ್ದ ದೂರುಗಳ ಹಿನ್ನಲೆಯಲ್ಲಿ ಪ್ರಕರಣಗಳು ದಾಖಲಾದ ನಂತರ. ಸುಶಿಲ್‌ ಹರಿ ರೆಸಿಡೆನ್ಸಿಯಲ್‌ ಸ್ಕೂಲ್‌ ಸಂಸ್ಥಾಪಕ ಶಿವ ಶಂಕರ್‌ ಬಾಬಾ ನಗರದಿಂದ ಪರಾರಿಯಾಗಿದ್ದರು. ಡೆಹ್ರಾಡೂನ್‌ ನಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು.

ಈ ಮಾಹಿತಿ ಪಡೆದುಕೊಂಡಿದ್ದ ಪೊಲೀಸ್‌ ತಂಡ, ಆತನ ಬಂಧನಕ್ಕಾಗಿ ಡೆಹ್ರಾಡೂನ್‌ ಗೆ ತೆರಳಿತ್ತು. ಆಸ್ಪತ್ರೆಗೆ ದಾಖಲಾಗಲು ಸಹಕರಿಸಿದ್ದ ಮಹಿಳಾ ಭಕ್ತರೊಬ್ಬರ ಮನೆಯಲ್ಲಿ ಬಾಬಾ ಆಶ್ರಯ ಪಡೆದುಕೊಂಡಿದ್ದ ಮಹಿಳಾ ಭಕ್ತೆಯ ಮೊಬೈಲ್‌ ಸಂಖ್ಯೆಗೆ ಬರುವ ಕರೆಗಳ ಆಧರಿಸಿ ಸಿಬಿ -ಸಿಐಡಿ ತಂಡ ಆಕೆಯ ಮನೆಯಲ್ಲಿ ಬಾಬಾ ಅವರನ್ನು ಬಂಧಿಸಿದೆ.

ಬಾಬಾ ಬಂಧನವಾದ ಕೂಡಲೇ, ಮತ್ತೊಂದು ಪೊಲೀಸರ ತಂಡ ಚೆನ್ನೈನ ಇಸಿಆರ್‌ ಪ್ರದೇಶದಲ್ಲಿರುವ ಶಾಲೆ ಗೆ ಭೇಟಿ ನೀಡಿ ಶಾಲಾ ಸದಸ್ಯರನ್ನು ವಿಚಾರಣೆ ನಡೆಸಿದೆ. ಶಿವ ಶಂಕರ ಬಾಬಾ ವಿರುದ್ದ ಶಾಲೆಯ ಮಾಜಿ ವಿದ್ಯಾರ್ಥಿಗಳು ಲೈಂಗಿಕ ದುರುಪಯೋಗ, ಲೈಂಗಿಕ ಕಿರುಕುಳ, ದುರ್ವತನೆ ದೂರುಗಳನ್ನು ನೀಡಿದ್ದ ಹಿನ್ನಲೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ.

SCROLL FOR NEXT