ದೇಶ

ನಿಯಮ ಪಾಲನೆ ಮಾಡದ ಟ್ವಿಟರ್ ಗೆ ದಂಡನೆಗೆ ಗುರಿ ಮಾಡಿ: ಐಟಿ ಉದ್ಯಮದ ಹಿರಿಯ ಟಿ.ವಿ. ಮೋಹನ್‌ದಾಸ್ ಪೈ

Srinivas Rao BV

ಬೆಂಗಳೂರು​: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳನ್ನು ಪಾಲಿಸದ ಟ್ವಿಟರ್ ಅನ್ನು ದಂಡನೆಗೆ ಗುರಿ ಮಾಡಬೇಕು ಎಂದು ಐಟಿ ಉದ್ಯಮದ ಹಿರಿಯ ಟಿ.ವಿ ಮೋಹನ್ ದಾಸ್ ಪೈ ಹೇಳಿದ್ದಾರೆ. 

ಮೈಕ್ರೋಬ್ಲಾಗಿಂಗ್ ಸೈಟ್ ಸೈದ್ಧಾಂತಿಕ, ಪಕ್ಷಪಾತದ ಸಾಮಾಜಿಕ ಜಾಲತಾಣವಾಗಿದೆ. ಟ್ವಿಟರ್ ತಟಸ್ಥವಾಗಿಲ್ಲ.

ಸರ್ಕಾರ ಕಾನೂನಿನ ನಿಯಮವನ್ನು ಜಾರಿಗೊಳಿಸಬೇಕು, ಮಾರ್ಗಸೂಚಿಗಳನ್ನು ಪಾಲನೆ ಮಾಡದ ಟ್ವಿಟರ್ ನ್ನು ದಂಡಿಸಬೇಕು, ನಿಯಮ ಪಾಲನೆ ಮಾಡುವುದಕ್ಕೆ ಸರ್ಕಾರ ಟ್ವಿಟರ್ ಗೆ ಮನವಿ ಮಾಡುವ ಅಗತ್ಯವಿಲ್ಲ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಸಾಮಾಜಿಕ ಜಾಲತಾಣದ ಸಂಸ್ಥೆಗಳೂ ಹೊಸ ನಿಯಮ, ಮಾರ್ಗಸೂಚಿಗಳ ಪ್ರಕಾರ ನಿಯಮಗಳ ಪಾಲನೆ ಮಾಡುತ್ತಿವೆ, ಟ್ವಿಟರ್ ವಿಶೇಷವೇನು ಅಲ್ಲ. ಯಾವುದೇ ಎಂಎನ್ ಸಿ ಗಳಿಗಿಂತಲೂ ದೇಶದ ಸಾರ್ವಭೌಮತ್ವ ಹಾಗೂ ಕಾನೂನುಗಳು ಮುಖ್ಯವಾಗಿರುತ್ತದೆ ಎಂದು ಪೈ ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಹೊಸ ಮಾರ್ಗಸೂಚಿಗಳ ಪಾಲನೆಗೆ ಎಲ್ಲಾ ಸಂಸ್ಥೆಗಳಿಗೂ ಸಾಕಷ್ಟು ಸಮಯ ನೀಡಲಾಗಿತ್ತು. ಟ್ವಿಟರ್ ಸೈದ್ಧಾಂತಿಕ, ಪಕ್ಷಪಾತದ ಜಾಲತಾಣವಾಗಿ ಬದಲಾಗಿದೆ. ತಟಸ್ಥ ನಿಲುವನ್ನು ಪಾಲಿಸುತ್ತಿಲ್ಲ, ಟ್ವಿಟರ್ ಪ್ರಾರಂಭವಾದಾಗ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು, ಭಾರತ ಜಾಗತಿಕ ಟೆಕ್ ಏಕಚಕ್ರಾಧಿಪತ್ಯದ ಅಧೀನಕ್ಕೆ ಒಳಪಡದೇ ಇರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಹಾಗೂ ಗ್ರಾಹರ ಸುರಕ್ಷತೆಗೆ ನ್ಯಾಯೋಚಿತ ನಿಯಮಗಳನ್ನು ಜಾರಿಗೊಳಿಸಬೇಕು" ಎಂದು ಪೈ ಒತ್ತಾಯಿಸಿದ್ದಾರೆ.

SCROLL FOR NEXT