ದೇಶ

ನಾಳೆ 7ನೇ ಅಂತಾರಾಷ್ಟ್ರೀಯ ಯೋಗ ದಿನ: ಬೆಳಗ್ಗೆ 6.15ರಿಂದ ದೂರದರ್ಶನದಲ್ಲಿ ನೇರ ಪ್ರಸಾರ, ಪ್ರಧಾನಿ ಭಾಷಣ 

Sumana Upadhyaya

ನವದೆಹಲಿ: ನಾಳೆ 7ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಧಾನ ಸಮಾರಂಭ ಬೆಳಗ್ಗೆ 6.15ಕ್ಕೆ ಆರಂಭವಾಗಲಿದ್ದು, ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ನೇರ ಪ್ರಸಾರವಾಗಲಿದೆ. ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸಹ ಭಾಷಣ ಮಾಡಲಿದ್ದಾರೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಲ್ಲಿ ನಡೆಯಲಿರುವ ಯೋಗ ಪ್ರದರ್ಶನದ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ.

ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆಯಲ್ಲಿ ದೂರದರ್ಶನ ಕಾರ್ಯಕ್ರಮವಾಗಿ ಆಯೋಜಿಸಲಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ ಪ್ರಮುಖ ಅಂಶವಾಗಿರಲಿದೆ.

ಜನರು ತಮ್ಮ ಮನೆಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಕಾರ್ಯಕ್ರಮದ ಭಾಗವಾಗಬಹುದು. ಪ್ರಧಾನಿ ಭಾಷಣದ ನಂತರ ಯೋಗ್ಯಾಭ್ಯಾಸದ ಪ್ರದರ್ಶನವೂ ಪ್ರಸಾರವಾಗಲಿದೆ. 

SCROLL FOR NEXT