ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ವಿನಾಶಕಾರಿ': ದೇಶದಲ್ಲಿನ ಕೋವಿಡ್ ನಿರ್ವಹಣೆ ಕುರಿತು ಶ್ವೇತ ಪತ್ರ ಹೊರಡಿಸಿದ ರಾಹುಲ್ ಗಾಂಧಿ!

ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ವೇತಪತ್ರ ಹೊರಡಿಸಿದ್ದು, ಘೋರ ಮತ್ತು ಹಾನಿಕಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿ
Srinivasa Murthy VN
Updated On : 22 Jun 2021, 1:06 pm

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ವೇತಪತ್ರ ಹೊರಡಿಸಿದ್ದು, ಘೋರ ಮತ್ತು ಹಾನಿಕಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯ ಕುರಿತು "ಶ್ವೇತಪತ್ರ" ವನ್ನು ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ನಿರ್ವಹಣೆಯನ್ನು ಘೋರವಾದ ಮತ್ತು ಹಾನಿಕಾರ ಎಂದು ಶ್ವೇತ ಪತ್ರದಲ್ಲಿ ಅಭಿಪ್ರಾಯಪಡಲಾಗಿದ್ದು,  ಕನಿಷ್ಟ ಪಕ್ಷ ಈಗ ಮೂರನೇ ಅಲೆಗೆ ಸಿದ್ಧತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು. 

'ದೇಶದಲ್ಲಿ ಮೊದಲ ಮತ್ತು ಎರಡನೆಯ ಅಲೆಯ ನಿರ್ವಹಣೆ 'ವಿನಾಶಕಾರಿ' ಅಥವಾ "ಹಾನಿಕಾರಕ" ಎಂಬುದು ಸ್ಪಷ್ಟವಾಗಿದೆ. ಇದು ಏಕೆ ವಿನಾಶಕಾರಿಯಾಗಿದೆ ಎಂಬುದಕ್ಕೆ ಕೆಲವು ಕಾರಣಗಳಿವೆ, ನಾವು ಆ ಕಾರಣಗಳನ್ನು ನಮ್ಮ ಶ್ವೇತಪತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ಇದು  ಬರಲಿರುವ ಮೂರನೇ ಅಲೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ನೀಲನಕ್ಷೆಯಾಗಿದೆ ಎಂದು ಹೇಳಿದರು.

Advertisement

Advertisement

ಅಂತೆಯೇ ಕೋವಿಡ್ ನಿರ್ವಹಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ ರಾಹುಲ್ ಗಾಂಧಿ, 'ಈ ಶ್ವೇತಪತ್ರದ ಗುರಿ ಸರ್ಕಾರದತ್ತ ಬೆರಳು ತೋರಿಸುವುದಲ್ಲ, ಆದರೆ ರಾಷ್ಟ್ರದ  ಮೂರನೇ ಅಲೆಗೆ ಸಿದ್ಧವಾಗಲು ಸಹಾಯ ಮಾಡುವುದು ಎಂದರು.

ಕೋವಿಡ್ ವಿರುದ್ಧದ ಹೋರಾಟದ ಏಕೈಕ ಅಸ್ತ್ರ ಲಸಿಕೆ ಮಾತ್ರ
ಇದೇ ವೇಳೆ ಕೋವಿಡ್ ವಿರುದ್ಧ ಹೋರಾಟದಲ್ಲಿ ನಮ್ಮ ಬಳಿ ಇರುವ ಏಕೈಕ ಪ್ರಮುಖ ಅಸ್ತ್ರ ಎಂದರೆ ಅದು ಕೋವಿಡ್ ಲಸಿಕೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ನಾವು ಸಾಧ್ಯವಾದಷ್ಟು ಬೇಗ ಶೇಕಡಾ 100 ರಷ್ಟು ವ್ಯಾಕ್ಸಿನೇಷನ್ ಪೂರೈಸಬೇಕು. ಕೋವಿಡ್-19 ವ್ಯಾಕ್ಸಿನೇಷನ್‌  ಕಾರ್ಯಕ್ರಮಗಳಿಗೆ ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಬೇಕು, ಯಾವುದೇ ಪಕ್ಷಪಾತ ಇರಬಾರದು ಮತ್ತು ಅವುಗಳನ್ನು ಬಿಜೆಪಿ ಅಥವಾ ವಿರೋಧ ರಾಜ್ಯಗಳಾಗಿ ನೋಡಬಾರದು ಎಂದು ಸಲಹೆ ನೀಡಿದರು. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement