ದೇಶ

ಜಮ್ಮು ಕಾಶ್ಮೀರದಲ್ಲಿ ಸುಧಾರಣೆ ಪ್ರಕ್ರಿಯೆ ಮುಗಿದು ಶೀಘ್ರದಲ್ಲೆ ಚುನಾವಣೆ ನಡೆಯಲಿದೆ: ಸರ್ವಪಕ್ಷ ಸಭೆ ನಂತರ ಪ್ರಧಾನಿ ಮಾತು

Raghavendra Adiga

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿಸುಧಾರಣೆ  ಪ್ರಕ್ರಿಯೆ ಶೀಘ್ರವಾಗಿ ನಡೆದು ಚುನಾಯಿತ ಸರ್ಕಾರವನ್ನು ಸ್ಥಾಪಿಸಲು ಮತದಾನವನ್ನು ನಡೆಸಬಹುದುಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಇದು ಅದರ ಅಭಿವೃದ್ಧಿ ಪಥಕ್ಕೆ ಶಕ್ತಿ ತುಂಬಲಿದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ 14 ರಾಜಕೀಯ ಮುಖಂಡರೊಂದಿಗೆ ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯ ನಂತರ ಸರಣಿ ಟ್ವೀಟ್‌ಗಳಲ್ಲಿ ಮೋದಿ, ಅಭಿವೃದ್ಧಿ ಹೊಂದಿದ ಮತ್ತು ಪ್ರಗತಿಪರ ಜಮ್ಮು ಮತ್ತು ಕಾಶ್ಮೀರವಾಗುವತ್ತ ನಡೆಯುತ್ತಿರುವ ಪ್ರಯತ್ನಗಳಲ್ಲಿ ಈ ಚರ್ಚೆಗಳು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. "ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಮತದಾನ ನಡೆಯಲು ಸುಧಾರಣೆ  ತ್ವರಿತಗತಿಯಲ್ಲಿ ನಡೆಯಬೇಕು ಮತ್ತು ಜಮ್ಮು ಮತ್ತು ಕಾಶ್ಮೀರ ಚುನಾಯಿತ ಸರ್ಕಾರವನ್ನು ಪಡೆಯುತ್ತದೆ ಇದು ಅಲ್ಲಿನ ಪ್ರದೇಶ ಅಭಿವೃದ್ಧಿ ಪಥಕ್ಕೆ ಬಲವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿ ಜನರು ಮೇಜಿನ ಸುತ್ತಲೂ ಕುಳಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಬಹುದಾದ ಅವಕಾಶ  ಎಂದು ಪ್ರಧಾನಿ ಹೇಳಿದರು.

"ನಾನು ಜಮ್ಮು ಮತ್ತು ಕಾಶ್ಮೀರಮುಖಂಡರಿಗೆ ಹೇಳಿದ್ದೇನೆಂದರೆ, ಜನರು, ವಿಶೇಷವಾಗಿ ಯುವಕರು ಕಾಶ್ಮೀರಕ್ಕೆ  ರಾಜಕೀಯ ನಾಯಕತ್ವವನ್ನು ಒದಗಿಸಬೇಕು ಮತ್ತು ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕು" ಎಂದು ಅವರು ಹೇಳಿದರು. ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲ 14 ನಾಯಕರು 2019 ರ ಆಗಸ್ಟ್‌ನಲ್ಲಿ ತೆಗೆದುಹಾಕಲಾದ ಅದರ ರಾಜ್ಯತ್ವವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದರು ಎಂದು ಅವರು ಹೇಳಿದರು.

ಅಧಿಕೃತ ಮೂಲಗಳ ಪ್ರಕಾರ, ಸಭೆಯ ಮುಖ್ಯ ಗಮನ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವುದು ಆಗಿದ್ದು ಇದಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.

2019 ರ ಆಗಸ್ಟ್ 5 ರ ನಂತರ ಕೇಂದ್ರ ನಾಯಕತ್ವ ಮತ್ತು ಜಮ್ಮು ಮತ್ತು ಕಾಶ್ಮೀರದ  ಮುಖ್ಯವಾಹಿನಿಯ ಪಕ್ಷಗಳ ನಡುವಿನ ಮೊದಲ ಸಂವಾದ ಇದಾಗಿದೆ, ಸಂವಿಧಾನದ 370 ನೇ ವಿಧಿ ತೆಗೆದುಹಾಕಿ ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು ಮತ್ತು ಅದನ್ನು ದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.

ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಯಶಸ್ವಿಯಾದಂತೆ ವಿಧಾನಸಭಾ ಚುನಾವಣೆಗಳನ್ನು ನಡೆಸುವುದು ಒಂದು ಆದ್ಯತೆಯಾಗಿದೆ ಮತ್ತು ಸುಧಾರಣೆ  ಪ್ರಕ್ರಿಯೆ ನಂತರ ಶೀಘ್ರದಲ್ಲೇ ಮತದಾನ ನಡೆಯಬಹುದು ಎಂದು ಮೋದಿ ಒತ್ತಿ ಹೇಳಿದರು, ಜಮ್ಮು ಮತ್ತು ಕಾಶ್ಮೀರದ ಸಮಾಜದ ಎಲ್ಲಾ ವರ್ಗದವರಿಗೆ ಸುರಕ್ಷತೆ ಮತ್ತು ಭದ್ರತೆ  ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು 

"ಸಭೆ ಬಹಳ ಸೌಹಾರ್ದಯುತವಾಗಿತ್ತು ಮತ್ತು ಅತ್ಯಂತ ಸಕಾರಾತ್ಮಕವಾಗಿತ್ತು, ಬಹಳ ಗೌರವಯುತವಾಗಿತ್ತು. ನಾವು ಪ್ರಜಾಪ್ರಭುತ್ವಕ್ಕಾಗಿ ಕೆಲಸ ಮಾಡಬೇಕೆಂದು ನಾವೆಲ್ಲರೂ ಒಪ್ಪಿದ್ದೇವೆ. ಜಮ್ಮು ಮತ್ತು ಕಾಶ್ಮೀರವನ್ನು ಸಂಘರ್ಷದ ವಲಯದ ಬದಲಾಗಿ  ಶಾಂತಿಯ ವಲಯವನ್ನಾಗಿ ಮಾಡಲು ಎಲ್ಲವನ್ನು ಮಾಡುತ್ತೇನೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ, "ಪೀಪಲ್ಸ್ ಕಾನ್ಫರೆನ್ಸ್ ನಾಯಕ ಮುಜಾಫರ್ ಹುಸೇನ್ ಬೇಗ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಸುಧಾರಣಾ ಪ್ರಕ್ರಿಯೆಯು ಮೊದಲು ಪೂರ್ಣಗೊಳ್ಳುತ್ತದೆ ಮತ್ತು ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಕ್ರಮತೆಗೆದುಕೊಳ್ಳಲಾಗುವುದು ಎಂದು ನಮಗೆ ತಿಳಿಸಲಾಯಿತು" ಎಂದು ಅವರು ಹೇಳಿದರು. ಆದರೆ, ಮತದಾನ ನಡೆಸಲು ಯಾವುದೇ ಕಾಲಮಿತಿ ನೀಡಿಲ್ಲ ಎಂದು ಅವರು ಹೇಳಿದರು.

"ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಪುನಃಸ್ಥಾಪಿಸುವ ಬೇಡಿಕೆಯನ್ನು ಸಭೆಯಲ್ಲಿ ಎಲ್ಲರೂ ಎತ್ತಿದರು" ಎಂದು ಅವರು ಹೇಳಿದರು, ರಾಜಕೀಯ ನಾಯಕರು ಎತ್ತುವ ಪ್ರತಿಯೊಂದು ವಿಷಯವನ್ನೂ ಪ್ರಧಾನಿ ಎಚ್ಚರಿಕೆಯಿಂದ ಆಲಿಸಿದರು.

SCROLL FOR NEXT