ಸಾಂದರ್ಭಿಕ ಚಿತ್ರ 
ದೇಶ

ಮಟನ್ ಊಟ ಹಾಕಿಸಲಿಲ್ಲ ಎಂದು ಮದುವೆ ಮುರಿದು ಬೇರೆ ಯುವತಿಯನ್ನು ಮದುವೆಯಾದ 'ಮದುಮಗ'!

ಹಬ್ಬದಲ್ಲಿ ಕಾರ್ಯಕ್ರಮದಲ್ಲಿ ಮಟನ್ ಊಟ ಹಾಕಿಸಲಿಲ್ಲ ಎಂದು ಆಕ್ರೋಶಗೊಂಡ ಮದುಮಗ ಮತ್ತೊಬ್ಬ ಯುವತಿಯನ್ನು ಮದುವೆಯಾದ ವಿಲಕ್ಷಣ ಘಟನೆ ಒಡಿಶಾದ ಜಜ್ ಪುರದಲ್ಲಿ ನಡೆದಿದೆ.

ಜಜ್ ಪುರ: ಹಬ್ಬದಲ್ಲಿ ಕಾರ್ಯಕ್ರಮದಲ್ಲಿ ಮಟನ್ ಊಟ ಹಾಕಿಸಲಿಲ್ಲ ಎಂದು ಆಕ್ರೋಶಗೊಂಡ ಮದುಮಗ ಮತ್ತೊಬ್ಬ ಯುವತಿಯನ್ನು ಮದುವೆಯಾದ ವಿಲಕ್ಷಣ ಘಟನೆ ಒಡಿಶಾದ ಜಜ್ ಪುರದಲ್ಲಿ ನಡೆದಿದೆ.

ಜಜ್ಪುರ್ ಜಿಲ್ಲೆಯ ಸುಕಿಂದಾ ಪೊಲೀಸ್ ಮಿತಿಯಲ್ಲಿರುವ ಮನತಿರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಟನ್ ಊಟ ಹಾಕಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಮದುವೆಯನ್ನೇ ಮುರಿದುಕೊಳ್ಳಲಾಗಿದೆ. ನೆರೆಯ ಕಿಯೋಂಘರ್ ಜಿಲ್ಲೆಯ ರೆಬನಪಲಸ್ಪಾಲ್ ಗ್ರಾಮದ ನಿವಾಸಿ  27 ವರ್ಷದ ರಾಮಕಾಂತ್ ಪತ್ರಾ ತನ್ನ ಮದುವೆಯನ್ನು ರದ್ದು ಮಾಡಿದ್ದಾನೆ.

ಮೂಲಗಳ ಪ್ರಕಾರ ಮದುವೆಗೂ ಮುನ್ನ ನಡೆದ ವರನ ಕಡೆಯವರಿಗೆ ಮದುವೆ ನಡೆಯುವ ಗ್ರಾಮದಲ್ಲಿ ಔತಣಕೂಟ ಆಯೋಜನೆ ಮಾಡಲಾಗಿತ್ತು. ಈ ಔತಣಕೂಟದಲ್ಲಿ ಮಟನ್ ಅಡುಗೆ ಮಾಡಿಸುವಂತೆ ವರನ ಕಡೆಯವರು ಕೇಳಿದ್ದರು. ಆದರೆ ವಧುವಿನ ಕಡೆಯವರು ಮಟನ್ ಅಡುಗೆ ಮಾಡಿಸಿರಲಿಲ್ಲ. ಇದೇ  ಕಾರಣಕ್ಕೆ ಆಕ್ರೋಶಗೊಂಡ ರಾಮಕಾಂತ್ ಪತ್ರಾ ವಧುವಿನ ಸಂಬಂಧಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ವಧುವಿನ ಕುಟುಂಬ ಸದಸ್ಯರು ಮನವಿ ಮಾಡಿದರೂ, ಆತ ಸಮಾಧಾನಗೊಳ್ಳಲಿಲ್ಲ. ಅಲ್ಲದೆ ಮದುವೆಯನ್ನೇ ಮುರಿದುಕೊಂಡು, ಹೋಗಿದ್ದಾನೆ. 

ಬಳಿಕ ವರ ಮತ್ತು ಅವನ ಸಂಬಂಧಿಕರು ಕುಹಿಕಾ ಪಂಚಾಯಿತಿಯ ಗಾಂಧಪಾಲ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಬಳಿಕ ಸಂಬಂಧಿಕರ ಮಾತಿನಂತೆ ತಮ್ಕಾ ಪೊಲೀಸ್ ವ್ಯಾಪ್ತಿಯಲ್ಲಿ ಫುಲಾಜರಾ ಪ್ರದೇಶದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ  ಸ್ಥಳೀಯ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.

1980 ರ ದಶಕದಲ್ಲಿ ಇಂತಹ ಘಟನೆಗಳು ಸುದ್ದಿಯಾಗುತ್ತಿತ್ತು. ಆದರೆ ಈಗಲೂ ಸಹ ಕ್ಷುಲ್ಲಕ ವಿಚಾರಕ್ಕೆ ಮದುವೆ ಮುರಿದುಕೊಂಡಿರುವುದು ಸುದ್ದಿಗೆ ಗ್ರಾಸವಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT