ಸಾಂದರ್ಭಿಕ ಚಿತ್ರ 
ದೇಶ

ಪಾಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರ ಜೊತೆಗೆ ಜೋಡಿಸಿ, ವಿದೇಶಕ್ಕೆ ಸುಲಭವಾಗಿ ಪ್ರಯಾಣಿಸಿ!

ಸರ್ಕಾರದ ಕೋವಿನ್ ಪೋರ್ಟಲ್ ನಲ್ಲಿ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್ ಪೋರ್ಟ್ ಜೊತೆ ಸಂಪರ್ಕಿಸಿ ಪ್ರಯಾಣ ಮಾಡಬಹುದು. ಪಾರ್ಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರದ ಜೊತೆಗೆ ಅಪ್ ಡೇಟ್ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸೇತು ಆಪ್ ಟ್ವೀಟ್ ಮಾಡಿದೆ.

ನವದೆಹಲಿ: ಸರ್ಕಾರದ ಕೋವಿನ್ ಪೋರ್ಟಲ್ ನಲ್ಲಿ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್ ಪೋರ್ಟ್ ಜೊತೆ ಸಂಪರ್ಕಿಸಿ ಪ್ರಯಾಣ ಮಾಡಬಹುದು. ಪಾರ್ಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರದ ಜೊತೆಗೆ ಅಪ್ ಡೇಟ್ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸೇತು ಆಪ್ ಟ್ವೀಟ್ ಮಾಡಿದೆ.

ಲಸಿಕೆ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್‌ನಲ್ಲಿರುವ ಹೆಸರು ಒಂದೇ ಎಂದು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ನಲ್ಲಿ ಒಂದು ಬಾರಿ ಹೆಸರು ಬದಲಾವಣೆಗೆ ಅವಕಾಶ ನೀಡುತ್ತದೆ. ಈ ತಿಂಗಳ ಆರಂಭದಲ್ಲಿ, ಕೋವಿಡ್ -19 ಲಸಿಕೆಗಾಗಿ ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು, ಶಿಕ್ಷಣ, ಉದ್ಯೋಗಗಳಿಗಾಗಿ ವಿದೇಶಕ್ಕೆ ಪ್ರಯಾಣಿಸುವವರು ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತೀಯ ತಂಡದ ಭಾಗವಾಗಿರುವವರು, ಅವರ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್‌ಪೋರ್ಟ್‌ಗಳೊಂದಿಗೆ ಲಿಂಕ್ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.

ಸಂಪರ್ಕದ ಪತ್ತೆ ಮತ್ತು ಲಸಿಕೆ ನಿರ್ವಹಣೆಯಲ್ಲಿ ಮುಕ್ತ ಮೂಲ ಡಿಜಿಟಲ್ ಪರಿಕರಗಳ ಬಳಕೆಯಲ್ಲಿ ಭಾರತದ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪಾಲುದಾರ ರಾಷ್ಟ್ರಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿದೆ. 

ಕೋವಿನ್ ಆ್ಯಪ್‌ನ ವಿವರಗಳನ್ನು ಹಂಚಿಕೊಳ್ಳಲು ಪಾಲುದಾರ ರಾಷ್ಟ್ರಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪ್ರಸ್ತಾಪಿಸಿದೆ. ವಿವರಗಳನ್ನು ದೃಢಪಡಿಸಿದ ನಂತರ ನಾವು ನವೀಕರಣಗಳನ್ನು ಒದಗಿಸುತ್ತೇವೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT