ದೇಶ

ಕೋವಿಡ್ ಅನ್ ಲಾಕ್: ದೆಹಲಿಯಲ್ಲಿ ನಾಳೆಯಿಂದ ಜಿಮ್ ಗಳು ಪುನರಾರಂಭ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಇಳಿಕೆ ಮುಂದುವರೆದಿದ್ದು, ಮುಂದಿನ ವಾರಕ್ಕಾಗಿ ಹೊಸ ಸಡಿಲಿಕೆಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.

ಆದೇಶದ ಪ್ರಕಾರ 50 ಜನರ ಸಾಮರ್ಥ್ಯದೊಂದಿಗೆ ಬ್ಯಾಂಕ್ವೆಂಟ್ ಹಾಲ್, ಮದುವೆ ಹಾಲ್ ಗಳು, ಹೋಟೆಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. 

ಒಟ್ಟು ಸಾಮರ್ಥ್ಯದ ಶೇಕಡಾ 50ರೊಂದಿಗೆ ಮುಂದಿನ ವಾರದಿಂದ ಯೋಗ ಸಂಸ್ಥೆಗಳು, ಜಿಮ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿದೆ. ದೆಹಲಿಯಲ್ಲಿ ಸುಮಾರು 9 ಸಾವಿರ ಜಿಮ್ ಗಳಿದ್ದು, ಜಿಮ್ ಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಹಲವು ದಿನಗಳಿಂದ ಮಾಲೀಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 100 ಕ್ಕಿಂತಲೂ ಕಡಿಮೆ ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮಂದಿ ಸಾವನ್ನಪ್ಪಿದ್ದಾರೆ. ದೆಹಲಿ ಸರ್ಕಾರ ಹಂತ ಹಂತವಾಗಿ ಅನ್ ಲೌಕ್ ಮಾಡುವ ಮೂಲಕ ಸಹಜ ಸ್ಥಿತಿಯತ್ತ ದೆಹಲಿ ಮರಳುತ್ತಿದೆ.

SCROLL FOR NEXT