ದೇಶ

"ಈ ಸರ್ಕಾರದಿಂದ ಸಂವಿಧಾನ 370 ವಿಧಿ ಮರು ಸ್ಥಾಪನೆ ನಿರೀಕ್ಷೆ ಅವಿವೇಕತನದ್ದು"; ಓಮರ್‌ ಅಬ್ದುಲ್ಲಾ

Srinivas Rao BV

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ಸಂವಿಧಾನ 370 ವಿಧಿಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸುವುದು ಅವಿವೇಕತನ ಹಾಗೂ ಮೂರ್ಖತನ ಎಂದು ಜಮ್ಮು- ಕಾಶ್ಮೀರ  ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370  ವಿಧಿ ರದ್ದತಿಯ ರಾಜಕೀಯ ಕಾರ್ಯಸೂಚಿ ಈಡೇರಿಸಿಕೊಳ್ಳಲು  ಬಿಜೆಪಿಗೆ 70 ವರ್ಷಗಳು ಬೇಕಾಯಿತು ಎಂದು ಅವರು ಹೇಳಿದರು. ನಮ್ಮ ಹೋರಾಟ ಇದೀಗ ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಿ ಆ ಮೂಲಕ 370 ನೇ ವಿಧಿಯನ್ನು ಮರಳಿ ತರಲಿದ್ದೇವೆ ಎಂದು ಹೇಳುವುದು ಜನರನ್ನು ಮೋಸಗೊಳಿಸುವುದಾಗಿದೆ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ 14 ಹಿರಿಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೆಗಲಿಯಲ್ಲಿ  ಸಭೆ ನಡೆಸಿದ ಒಂದು ದಿನದ ನಂತರ ಓಮರ್ ಅಬ್ದುಲ್ಲಾ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಜಮ್ಮು ಕಾಶ್ಮೀರದಲ್ಲಿ  ಆರ್ಟಿಕಲ್ 370  ಮತ್ತೆ  ಜಾರಿಗೊಳ್ಳಲಿದೆ ಎಂದು ಆಶಿಸುವುದು ಅವಿವೇಕತನ ಎಂದು ಓಮರ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ. ಅದನ್ನು ಮರು ಅನುಷ್ಟಾನಗೊಳಿಸುವ ಸಂಬಂಧ ಪ್ರಸ್ತುತ  ಸರ್ಕಾರದಿಂದ ಯಾವುದೇ ಸಂಕೇತಗಳು, ಸೂಚನೆಗಳು ಕಾಣುತ್ತಿಲ್ಲ. ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ  ಪ್ರಧಾನಿ ಮೋದಿಯವರೊಂದಿನ ಸಭೆಯಲ್ಲಿ ಏನನ್ನೂ ಮಾತನಾಡದ ಐವರು ಮುಖಂಡರ ಪೈಕಿ ಓಮರ್ ಅಬ್ದುಲ್ಲಾ  ಕೂಡಾ ಒಬ್ಬರು. ಅವರಲ್ಲದೆ ನಿರ್ಮಲ್ ಸಿಂಗ್, ತಾರಚಂದ್, ಗುಲಾಮ್-ಎ-ಮಿರ್ ಹಾಗೂ ರವೀಂದರ್ ರೈನಾ ಕೂಡ ಸಭೆಯಲ್ಲಿ ಮಾತನಾಡಿರಲಿಲ್ಲ.

ಸಭೆಯಲ್ಲಿ "ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗಳ ಕುರಿತು, ಕ್ಷೇತ್ರಗಳ ಪುನರ್ ವಿಂಗಡನಾ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಬಗ್ಗೆ, ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಹಾಗೂ ಅದಕ್ಕೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಪ್ರಧಾನ ಮಂತ್ರಿ ಮಾತನಾಡಿದರು" ಎಂದು ಅವರು ಹೇಳಿದರು. ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ ನಂತರ ಈ ಸಭೆ ಕರೆದಿದ್ದರಿಂದಾಗಿ  ತಾವು ಸಾಕಷ್ಟು ಆಸಕ್ತಿ ಹೊಂದಿದ್ದಾಗಿ, ಕಳೆದ ವರ್ಷ ಕೊರೊನಾ ಪ್ರಾರಂಭವಾದ ನಂತರದ ಅತಿದೊಡ್ಡ ಭೌತಿಕ ಸಭೆ ಇದಾಗಿತ್ತು ಎಂದು ಅವರು ಹೇಳಿದ್ದಾರೆ.

SCROLL FOR NEXT