ದೇಶ

ಕಾಂಗ್ರೆಸ್ ಇಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷಗಳ ಮೈತ್ರಿ ಅಪೂರ್ಣ: ಶಿವಸೇನೆ ನಾಯಕ ಸಂಜಯ್ ರಾವತ್ 

Sumana Upadhyaya

ಮುಂಬೈ: ರಾಷ್ಟ್ರಮಟ್ಟದಲ್ಲಿ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟು ತರುವ ಪ್ರಯತ್ನ ಸಾಗುತ್ತಿದ್ದು ಕಾಂಗ್ರೆಸ್ ಸೇರದಿದ್ದರೆ ಮೈತ್ರಿ ಅಪೂರ್ಣವಾಗುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಸರ್ಕಾರದ ವಿರುದ್ಧ ಎಲ್ಲಾ ಮೈತ್ರಿಕೂಟ ರಚಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದ್ದು, ಈಗಿನ ಎನ್ ಡಿಎ ಮೈತ್ರಿಕೂಟಕ್ಕೆ ಬಲವಾದ ಪರ್ಯಾಯ ಮೈತ್ರಿಕೂಟವನ್ನು ತರುವುದು ಇದರ ಉದ್ದೇಶವಾಗಿದೆ ಎಂದರು.

ಎಂಟು ಪ್ರಮುಖ ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಎಪಿ, ಆರ್ ಎಲ್ ಡಿ ಮತ್ತು ಎಡಪಕ್ಷಗಳು ಕಳೆದ ವಾರ ದೆಹಲಿಯಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದವು. ದೇಶದಲ್ಲಿ ಇಂದು ಎದುರಾಗುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು.

ಸಭೆಯಲ್ಲಿ ಕಾಂಗ್ರೆಸ್ ನ ಯಾವೊಬ್ಬ ನಾಯಕರೂ ಭಾಗವಹಿಸಿರಲಿಲ್ಲ. ಸಭೆಯಲ್ಲಿ ಬಿಜೆಪಿಗೆ ಪರ್ಯಾಯವಾಗಿ ಮೈತ್ರಿಕೂಟವನ್ನು ರಚಿಸುವ ಬಗ್ಗೆ ಮಾತುಕತೆ, ಚರ್ಚೆಗಳು ನಡೆದಿರಬಹುದೆಂದು ಊಹಾಪೋಹಗಳು ಎದ್ದಿವೆ.

ಈ ಬಗ್ಗೆ ಇಂದು ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಮೂರನೇ ತೃತೀಯ ರಂಗ ಅಥವಾ ಯಾವುದೇ ರಂಗದ ಅಗತ್ಯವಿಲ್ಲ. ಶರದ್ ಪವಾರ್ ಅವರು ಅದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಕೂಡ ಅದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್ ಕೂಡ ಅದನ್ನು ಪ್ರೋತ್ಸಾಹಿಸುತ್ತದೆ ಎಂದು ಕೇಳಿದ್ದೇನೆ ಎಂದರು.

ಬಿಜೆಪಿಗೆ ಪ್ರತಿಯಾಗಿ ಮೈತ್ರಿಕೂಟ ರಚಿಸುವುದಾದರೆ ಅಲ್ಲಿ ಕಾಂಗ್ರೆಸ್ ಬಹಳ ಮುಖ್ಯವಾಗುತ್ತದೆ. ಈಗಿರುವ ರಾಜಕೀಯ ಸ್ಥಿತಿಗತಿಯಲ್ಲಿ ಪರ್ಯಾಯ ಮೈತ್ರಿಕೂಟ ಬಹಳ ಮುಖ್ಯವಾಗುತ್ತದೆ. ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

SCROLL FOR NEXT