ದೇಶ

"ನಾನು ಮಾಡಿದ್ದಕ್ಕೆ ಬದ್ಧನಾಗಿದ್ದೇನೆ": ಕೋವಿಡ್ ಕಾರಣದಿಂದ ವಿವಾಹವನ್ನು ಅರ್ಧದಲ್ಲೇ ತಡೆದ ತ್ರಿಪುರಾ ಅಧಿಕಾರಿ ಸಮರ್ಥನೆ!

Srinivas Rao BV

ಅಗರ್ತಲ: ತ್ರಿಪುರಾದಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ವಿವಾಹ ಕಾರ್ಯಕ್ರಮವನ್ನು ಅರ್ಧದಲ್ಲೇ ತಡೆದ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. 

ಪಶ್ಚಿಮ ತ್ರಿಪುರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಶ್ ಕುಮಾರ್ ಜಾದವ್ ಕೋವಿಡ್-19 ನಿರ್ಬಂಧಗಳನ್ನು ಜಾರಿಗೆ ತರಲು ವಿವಾಹ ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಅಧಿಕಾರಿಯಾಗಿದ್ದಾರೆ. 

ಘಟನೆ ನಡೆದಾಗಿನಿಂದ ಬಿಜೆಪಿ ನಾಯಕರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಯಾದವ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಘಟನೆ ಕುರಿತು ತನಿಖೆ ನಡೆಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಸಿಎಂ ಬಿಪ್ಲಬ್ ದೇವ್ ಆದೇಶ ನೀಡಿದ್ದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವೆಸ್ಟ್ ತ್ರಿಪುರದ ಅಧಿಕಾರಿ "ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಲು ಈ ಕ್ರಮ ಕೈಗೊಂಡಿದ್ದೇನೆ, ಕಾನೂನು ಜಾರಿಗೊಳಿಸುವುದು ಹಾಗೂ ಕೋವಿಡ್-19 ತಡೆಗಟ್ಟುವುದು ನನ್ನ ಕರ್ತವ್ಯವಾಗಿದೆ, ನಾನು ಮಾಡಿದ್ದಕ್ಕೆ ಬದ್ಧನಾಗಿದ್ದೇನೆ" ಎಂದು ಹೇಳಿದ್ದಾರೆ. 

ಜಾದವ್ ಅವರು ಕೋವಿಡ್-19 ನಿರ್ಬಂಧ ಕಾನೂನು ನಿಯಮಗಳನ್ನು ಮೀರಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

SCROLL FOR NEXT