ದೇಶ

ದೆಹಲಿಗೆ 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಸರಬರಾಜು ಮಾಡಿ ಇಲ್ಲವೆ ನ್ಯಾಯಾಂಗ ನಿಂದನೆ ಎದುರಿಸಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ

Raghavendra Adiga

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಗೆ ಶನಿವಾರವೇ 490 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ ಬಾತ್ರಾ ಆಸ್ಪತ್ರೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು "ಇನ್ನು ಸಾಕು" ಎಂದು ಸರ್ಕಾರಕ್ಕೆ ತಿವಿದಿದೆ.

"ದೆಹಲಿಯಲ್ಲಿ ಸಾಯುತ್ತಿರುವ ಜನರನ್ನು ನಾವು ಕಣ್ಣುಮುಚ್ಚಿ ನೋಡುತ್ತಿರುತ್ತೇವೆ ಎಂದು ನೀವು ಭಾವಿಸಿದ್ದೀರಾ?" ಕೋರ್ಟ್ ಕೇಂದ್ರವನ್ನು ಕೇಳಿದೆ.

"ನೀವು ವ್ಯವಹಾರ ನಡೆಸುವವರು,  ಆದರೆ ಇದಾಗಲೇ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದೆ." ಎಂದು ನ್ಯಾಯಾಲಯ ಹೇಳಿದೆ ಮತ್ತು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರದವರೆಗೆ ಅಥವಾ ಅರ್ಧ ಘಂಟೆಯವರೆಗೆ ಆದೇಶವನ್ನು ಮುಂದೂಡಬೇಕೆಂಬ ಕೇಂದ್ರದ ಮನವಿಯನ್ನು ನಿರಾಕರಿಸಿದೆ.  

ದೆಹಲಿಗೆ ಕೇಂದ್ರವು 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಹಂಚಿಕೆ ಮಾಡಿದೆ ಮತ್ತು "ನೀವು ಅದನ್ನು ಪೂರೈಸಬೇಕು" ಎಂದು ನ್ಯಾಯಪೀಠ ಹೇಳಿದೆ.

SCROLL FOR NEXT