ದೇಶ

ಇಸ್ರೇಲ್, ಬ್ರಿಟನ್ ನಿಂದ ಭಾರತಕ್ಕೆ ವೈದ್ಯಕೀಯ ಉಪಕರಣಗಳ ಪೂರೈಕೆ

Nagaraja AB

ನವದೆಹಲಿ: ಕೋವಿಡ್-19 ಪ್ರಕರಣಗಳ ತೀವ್ರತೆಯಿಂದ ನಲುಗಿರುವ ಭಾರತಕ್ಕೆ ಇಸ್ರೇಲ್ ಹಾಗೂ ಬ್ರಿಟನ್ ರಾಷ್ಟ್ರಗಳು ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಪೂರೈಸುವುದಾಗಿ ಹೇಳಿವೆ. 

ಇಸ್ರೇಲ್ ವಾರ ಪೂರ್ತಿ ಭಾರತಕ್ಕೆ ಜೀವ ರಕ್ಷಕ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಆಕ್ಸಿಜನ್ ಜನರೇಟರ್ ಗಳು, ಉಸಿರಾಟ ಸಾಧನಗಳು ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ಇಂದಿನಿಂದ ವಾರಪೂರ್ತಿ ಕಳುಹಿಸುವುದಾಗಿ ಇಸ್ರೇಲ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಇಸ್ರೇಲ್ ನ ಅತ್ಯಪ್ತ ರಾಷ್ಟ್ರವಾಗಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತದೊಂದಿಗೆ ನಿಲುತ್ತೇವೆ. ನಮ್ಮ ಭಾರತೀಯ ಸಹೋದರರು, ಸಹೋದರಿಯರಿಗೆ ಜೀವ ರಕ್ಷಕ ಸಲಕರಣೆಗಳನ್ನು ಪೂರೈಸುತ್ತಿರುವುದಾಗಿ ಇಸ್ರೇಲ್ ವಿದೇಶಾಂಗ ಸಚಿವ ಗಾಬಿ ಗಬಿ ಅಶ್ಕೆನಾಜಿ ತಿಳಿಸಿದ್ದಾರೆ.

ಭಾರತಕ್ಕೆ ಮತ್ತೆ 1 ಸಾವಿರ ವೆಂಟಿಲೇಟರ್  ಗಳನ್ನು ಪೂರೈಸುವುದಾಗಿ ಬ್ರಿಟನ್ ಸರ್ಕಾರ ಹೇಳಿದೆ.ಈ ಹಿಂದೆ ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕಗಳು ಸೇರಿದಂತೆ 600 ವೈದ್ಯಕೀಯ  ಸಲಕರಣೆಗಳನ್ನು ಪೂರೈಸುವುದಾಗಿ ಬ್ರಿಟನ್ ಸರ್ಕಾರ ಒಪ್ಪಿಕೊಂಡಿತ್ತು. ಅಮೆರಿಕಾ, ಜರ್ಮನಿ, ಪಾಕಿಸ್ತಾನ ಸೇರಿದಂತೆ ಇತರ ರಾಷ್ಟ್ರಗಳು ಕೂಡಾ ಭಾರತಕ್ಕೆ  ಬೆಂಬಲವನ್ನು ನೀಡುತ್ತಿವೆ.

SCROLL FOR NEXT