ದೇಶ

ವೈದ್ಯಕೀಯ ಆಮ್ಲಜನಕ ಹೊತ್ತ ಟ್ಯಾಂಕರ್‍ ಗಳಿಗೆ ಟೋಲ್ ಶುಲ್ಕವಿಲ್ಲ

Srinivas Rao BV

ನವದೆಹಲಿ: ದೇಶಾದ್ಯಂತ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸರಬರಾಜು ಸುಗಮಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್; ಪ್ಲಾಜಾಗಳಲ್ಲಿ ಆಮ್ಲಜನಕ ಹೊತ್ತ ಟ್ಯಾಂಕರ್ ಗಳಿಗೆ ಯಾವುದೇ ಶುಲ್ಕ ವಿಧಿಸದೆ ಸರಾಗವಾಗಿ ಸಾಗಲು ಅನುವು ಮಾಡಿಕೊಡಲಾಗಿದೆ. 

ಮುಂದಿನ ಎರಡು ತಿಂಗಳ ವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ ಹೊತ್ತ ಕಂಟೈನರ್ ಗಳನ್ನು ಆಂಬ್ಯುಲೆನ್ಸ್ ಗಳಂತೆ ತುರ್ತು ಸೇವೆಗಳ ವಾಹನಗಳಾಗಿ ಪರಿಗಣಿಸಲಾಗುತ್ತದೆ ಎಂದು ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ. 

ಫಾಸ್ಟ್ ಟ್ಯಾಗ್ ಜಾರಿ ನಂತರ ಟೋಲ್ ಪ್ಲಾಜಾಗಳಲ್ಲಿ ನಿಲುಗಡೆ ಹೆಚ್ಚು ತಡ ಇಲ್ಲವಾದರೂ, ಆಮ್ಲಜನಕ ಹೊತ್ತ ವಾಹನಗಳು ತ್ವರಿತವಾಗಿ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುವು ಮಾಡಿಕೊಟ್ಟಿದೆ. 

ಸಾಂಕ್ರಾಮಿಕ ವಿರುದ್ಧ ಹೋರಾಡಲು ಮತ್ತು ಕ್ರಿಯಾಪರವಾಗಿ ಕೆಲಸ ಮಾಡುವ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳ ಪ್ರಯತ್ನಗಳಿಗೆ ಸಹಾಯ ಮಾಡಲು ಪ್ರಾಧಿಕಾರ ತನ್ನ ಅಧಿಕಾರಿಗಳು ಮತ್ತು ಇತರ ಭಾಗೀದಾರರಿಗೆ ನಿರ್ದೇಶನಗಳನ್ನು ಹೊರಡಿಸಿದೆ. 

ಕೋವಿಡ್ ನಿಂದ ಭಾದಿತರಾದ ವ್ಯಕ್ತಿಗಳ ಜೀವ ಉಳಿಸಲು ಆಸ್ಪತ್ರೆಗಳಿಗೆ ಮತ್ತು ವೈದ್ಯಕೀಯ ಕೇಂದ್ರಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯನ್ನು ಸಕಾಲದಲ್ಲಿ ಪೂರೈಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ವೈದ್ಯಕೀಯ ಆಮ್ಲಜನಕ ಹೊತ್ತ ಲಾರಿಗಳಿಗೆ ಯಾವುದೇ ಶುಲ್ಕ ವಿಧಿಸದಿರಲು ತೀರ್ಮಾನಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

SCROLL FOR NEXT