ದೇಶ

ಸ್ಪುಟ್ನಿಕ್ ವಿ ಸಿಂಗಲ್ ಡೋಸ್ ಕೊರೋನಾ ಲಸಿಕೆ ಬಗ್ಗೆ ಪರಿಶೀಲನೆ: ನೀತಿ ಆಯೋಗ ಸದಸ್ಯ ವಿಕೆ ಪೌಲ್

Nagaraja AB

ನವದೆಹಲಿ: ಕೊರೋನಾ ಲಸಿಕೆಯಿಂದ ರಕ್ಷಣೆ ನೀಡಬಲ್ಲ ರಷ್ಯಾದ 'ಸ್ಪುಟ್ನಿಕ್ ಲೈಟ್'  ಕೊರೋನಾ ವೈರಸ್ ಲಸಿಕೆಯ ಸಿಂಗಲ್ ಡೋಸ್ ಬಗ್ಗೆ ಭಾರತ ಪರಿಶೀಲನೆ ನಡೆಸಲಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕೆ ಪೌಲ್, ಸ್ಪುಟ್ನಿಕ್ ವಿ ಎರಡು ಡೋಸ್ ಲಸಿಕೆಯಾಗಿದ್ದು, ಮೂರು ವಾರಗಳ ಅಂತರದಲ್ಲಿ ಎರಡು ಬಾರಿ ಈ ಲಸಿಕೆಯನ್ನು  ಪಡೆದುಕೊಳ್ಳಬೇಕಾಗಿದೆ.ಈ ಎರಡು ಲಸಿಕೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿದೆ ಎಂದರು.

ಒಂದು ವೇಳೆ ಸ್ಪುಟ್ನಿಕ್ ಲೈಟ್ ಅಭಿವೃದ್ಧಿಯಾದರೆ ಒಂದೇ ಡೋಸ್ ಲಸಿಕೆ ಸಾಕು ಎನ್ನುತ್ತಿದ್ದಾರೆ.ಆದರೆ, ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ. ಇಮ್ಯುನೊಜೆನಿಸಿಟಿ ಮತ್ತು ಅದರ ಡಾಟಾ ಪರಿಶೀಲನೆ ನಂತರ ನಿರ್ಧಾರ ಕೈಗೊಳ್ಳಲಾಗುವುದು, ಹೆಚ್ಚಿನ ಮಾಹಿತಿ ಬರಲಿ ಎಂದು ಅವರು ಹೇಳಿದರು.

ರಷ್ಯಾ ಹೇಳುವಂತೆ ಸ್ಪುಟ್ನಿಕ್ ಲೈಟ್ ನ ಒಂದೇ ಡೋಸ್ ಸಾಕು ಎನ್ನುವುದು ಸತ್ಯವಾದರೆ, ಅದರಿಂದ  ಭಾರತದಲ್ಲಿ ಲಸಿಕೆ ವೇಗ ದುಪ್ಪಟ್ಟು ಆಗಲಿದೆ. ಆದರೆ ಅದು ಬಂದಾಗ ವೈಜ್ಞಾನಿಕ ಡಾಟಾ ಮತ್ತು ಮಾಹಿತಿಯನ್ನು ಆಧಾರಿತವಾಗಿರಬೇಕಾಗಿರುತ್ತದೆ ಎಂದು ಪೌಲ್ ತಿಳಿಸಿದರು.

SCROLL FOR NEXT