ದೇಶ

ಅಸ್ಸಾಂ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಸರ್ಬಾನಂದ ಸೋನೋವಾಲ್, ಸಿಎಂ ಆಯ್ಕೆ ಕಸರತ್ತು ಆರಂಭ

Srinivasamurthy VN

ನವದೆಹಲಿ: ಅಸ್ಸಾಂ ಚುನಾವಣೆಯಲ್ಲಿಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಬೆನ್ನಲ್ಲೇ ಇದೀಗ ಸಿಎಂ ಆಯ್ಕೆ ಕಸರತ್ತು ಆರಂಭವಾಗಿದೆ.

ಇಂದು ಸಿಎಂ ಸ್ಥಾನಕ್ಕೆ ಸರ್ಬಾನಂದ ಸೋನೋವಾಲ್ ಅವರು ರಾಜಿನಾಮೆ ನೀಡಿದ್ದು, ಆ ಮೂಲಕ ಸಿಎಂ ಆಯ್ಕೆ ಕಸರತ್ತಿಗೆ ಅಧಿಕೃತ ಚಾಲನೆ ನೀಡಿದ್ದಾರೆ.  ಇಂದು ಸರ್ಬಾನಂದ ಸೋನೊವಾಲ್ ಅವರು ಗವರ್ನರ್ ಜಗದೀಶ್ ಮುಖಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿಗಳೆಸಿಕೊಂಡಿರುವ ಸರ್ಬಾನಂದ ಸೋನೋವಾಲ್ ಮತ್ತು ಹಿಮಂತ್ ಬಿಸ್ಕಾ ಶರ್ಮಾ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲಮೂಡಿಸಿದೆ. ನಾಯಕರಿಬ್ಬರೂ ಬಿಜೆಪಿ ಹೈಕಮಾಂಡ್‌ನೊಂದಿಗೆ ಸುಮಾರು  4 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, 'ಭಾನುವಾರ ಗುವಾಹಟಿಯಲ್ಲಿ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ.ಮುಂದಿನ ಸರ್ಕಾರ ಕುರಿತ ಎಲ್ಲಿಯೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸಲಿದೆ' ಎಂದಿದ್ದಾರೆ.

ಬಿಜೆಪಿಯ ಅಸ್ಸಾಂ ಶಾಸಕಾಂಗ ಪಕ್ಷವು ಭಾನುವಾರ ಗುವಾಹಟಿಯಲ್ಲಿ ಸಭೆ ಸೇರುವ ಸಾಧ್ಯತೆಯಿದ್ದು, ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಅಲ್ಲಿ ಉತ್ತರಿಸಲಾಗುವುದು ಎಂದು ಸರಣಿ ಸಭೆಗಳ ಬಳಿಕ ಶರ್ಮಾ ತಿಳಿಸಿದ್ದಾರೆ.  ಸೋನೊವಾಲ್ ಅವರು ಅಸ್ಸಾಂನ ಸ್ಥಳೀಯ  ಸೋನೊವಾಲ್-ಕಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. ಅಸ್ಸಾಂ ಬ್ರಾಹ್ಮಣರಾದ ಹಿಮಂತ ಬಿಸ್ವ ಶರ್ಮಾ ಅವರು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರಾಗಿದ್ದಾರೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿರಲಿಲ್ಲ. 2016ರ ಚುನಾವಣೆಯಲ್ಲಿ ಸೋನೊವಾಲ್ ಅವರನ್ನು  ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದಿತ್ತು.

126 ಸದಸ್ಯಬಲದ ಅಸ್ಸಾಂವಿಧಾನಸಭೆಯಲ್ಲಿ ಬಿಜೆಪಿ 60 ಕ್ಷೇತ್ರಗಳಲ್ಲಿ ಹಾಗೂ ಮಿತ್ರಪಕ್ಷಗಳಾದ ಎಜಿಪಿ 9 ಕ್ಷೇತ್ರಗಳಲ್ಲಿ, ಯುಪಿಪಿಎಲ್ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.
 

SCROLL FOR NEXT