ದೇಶ

ಜೈಪುರ: ಕೋವಿಡ್-19 ರೋಗಿಗೆ ಬೆಡ್ ವ್ಯವಸ್ಥೆ ಮಾಡಲು ಲಂಚ, ನರ್ಸ್ ಬಂಧನ 

Srinivas Rao BV

ಜೈಪುರ: ಕೋವಿಡ್-19 ಪ್ರಕರಣಗಳು ಏರುಗತಿಯಲ್ಲಿದ್ದು ರೋಗಿಗೆ ಬೆಡ್ ವ್ಯವಸ್ಥೆ ಮಾಡಲು ಲಂಚ ಪಡೆದ ನರ್ಸ್ ನ್ನು ಬಂಧಿಸಿರುವ ಘಟನೆ ಜೈಪುರದಲ್ಲಿ ನಡೆದಿದೆ. 

ರಾಜಸ್ಥಾನದ ಜೈಪುರದಲ್ಲಿ ಕೋವಿಡ್-19 ರೋಗಿಗಳಿಗಾಗಿ ಅತಿ ದೊಡ್ಡ ವ್ಯವಸ್ಥೆ ಲಭ್ಯವಿದ್ದ ಆರ್ ಯುಹೆಚ್ಎಸ್ ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದ್ದು, ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ. 

ನರ್ಸ್ ಅಶೋಕ್ ಕುಮಾರ್ ಗುರ್ಜರ್ ­ಬಂಧಿತ ವ್ಯಕ್ತಿಯಾಗಿದ್ದು, ಇಬ್ಬರು ವೈದ್ಯರೊಂದಿಗೆ ಸೇರಿ ಐಸಿಯು ಬೆಡ್ ನ್ನು ಕೋವಿಡ್-19 ಸೋಂಕಿತ ವ್ಯಕ್ತಿಯೋರ್ವರಿಗೆ ಬೆಡ್ ವ್ಯವಸ್ಥೆ ಮಾಡುವುದಕ್ಕಾಗಿ ಸಂಬಂಧಿಕರಿಂದ 23,000 ರೂಪಾಯಿಗಳನ್ನು ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. 

ಇನ್ನು ಮಹಿಳಾ ರೋಗಿಯೊಬ್ಬರಿಗೆ ಐಸಿಯು ಬೆಡ್ ಬುಕ್ ಮಾಡುವುದಕ್ಕಾಗಿ ಆರ್ ಯುಹೆಚ್ಎಸ್ ನ ವೈದ್ಯರು 2 ಲಕ್ಷ ರೂಪಾಯಿಗಳ ಬೇಡಿಕೆ ಮುಂದಿಟ್ಟಿದ್ದೂ ಬಹಿರಂಗಗೊಂಡಿದೆ. ಗುರ್ಜರ್ ರೋಗಿಯ ಸಂಬಂಧಿಕರಿಂದ ಅದಾಗಲೇ 95000 ರೂಪಾಯಿಗಳನ್ನು ಪಡೆದಿದ್ದ. 

ಈ ಬಗ್ಗೆ ಡಿಜಿ ಎಸಿಬಿ ಬಿಎಲ್ ಸೋನಿ ಮಾಹಿತಿ ನೀಡಿದ್ದು, ರೋಗಿಯ ಕುಟುಂಬ ಸದಸ್ಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. "ಎಸಿಬಿ ಹೆಚ್ಚುವರಿ ಎಸ್ ಪಿ ಬಜರಂಗ್ ಸಿಂಗ್ ಮಾಹಿತಿಗಳನ್ನು ಕಲೆಹಾಕಿ ಡಿಎಸ್ ಪಿ ಕಮಲ್ ನಯನ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು" ಎಂದು ಹೇಳಿದ್ದಾರೆ. ಅಶೋಕ್ ಗುರ್ಜರ್ ಜೊತೆಗೆ ಡಾ.ನೇಂದ್ರ ಹಾಗೂ ಡಾ. ಮನೀಷ್ ಸಹ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. 

SCROLL FOR NEXT