ದೇಶ

ಕೇರಳದ ಶತಾಯುಷಿ ಕಮ್ಯುನಿಸ್ಟ್ ನಾಯಕಿ ಕೆ.ಆರ್. ಗೌರಿ ಇನ್ನಿಲ್ಲ

Raghavendra Adiga

ತಿರುವನಂತಪುರಂ: ಹಿರಿಯ ಕಮ್ಯುನಿಸ್ಟ್ ಮತ್ತು ಜನಾದಿಪತ್ಯ ಸಂರಕ್ಷಣಾ ಸಮಿತಿ (ಜೆಎಸ್ಎಸ್) ಮುಖಂಡರಾಗಿದ್ದ  ಕೆ ಆರ್ ಗೌರಿ ಮಂಗಳವಾರ ನಿಧನರಾದರು. ಆಕೆಗೆ 101 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಗಳ ನಂತರ ಕಳೆದ ಕೆಲವು ವಾರಗಳಿಂದ ಆಕೆಯನ್ನು ರಾಜ್ಯ ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಅವರರು ಕೊನೆಯುಸಿರೆಳೆದರೆಂದು ಮಾಹಿತಿ ಲಭಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಗೌರಿಯವರ ಆರೋಗ್ಯ ವಿಚಾರಿಸಿದ್ದಾರೆ.

ಕೇರಳದ ಇತಿಹಾಸದಲ್ಲಿ ಒಬ್ಬ ಪ್ರಸಿದ್ಧ ರಾಜಕೀಯ ನಾಯಕಿಯಾಗಿದ್ದ ಗೌರಿ ರಾಜ್ಯದಲ್ಲೇ ಅತಿಹೆಚ್ಚಿನ ಅವಧಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಮಹಿಳೆ ಎನಿಸಿದ್ದರು. ವಿಧಾನಸಭೆಗೆ 10 ಬಾರಿ ಚುನಾಯಿತರಾದ ಅವರು ಆರು ವಿವಿಧ ಸರ್ಕಾರಗಳ ಅವಧಿಯಲ್ಲಿ 16 ವರ್ಷಗಳ ಕಾಲ ಸಚಿವರಾಗಿದ್ದರು. ಕಂದಾಯ, ಅಬಕಾರಿ, ಕೈಗಾರಿಕೆ, ಆಹಾರ ಮತ್ತು ಕೃಷಿ ಸೇರಿದಂತೆ ವಿವಿಧ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದರು.

ಜೆಎಸ್ಎಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಗೌರಿ 2016 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನಿಂದಾಗಿ ಯುಡಿಎಫ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ನಂತರ, ಅವರ ಪಕ್ಷವು ಎಲ್ಡಿಎಫ್ ನೊಂದಿಗೆ ಕೈಜೋಡಿಸಿತು ಆದರೆ ಇಲ್ಲಿ ಪಕ್ಷವು ಅರ್ಹ ಪ್ರಾತಿನಿಧ್ಯವನ್ನು ಪಡೆಯಲಿಲ್ಲ. ಅದಾಗ ಪಕ್ಷ ಅನೇಕ ಹೋಳಾಗಿ ವಿಭಜನೆಗೊಂಡಿತು. ಅದಾಗ್ಯೂ , ಗೌರಿ ಮತ್ತು ಅವರ ಬೆಂಬಲಿಗರು ಯಾವಾಗಲೂ ಎಡಪಂಥೀಯ ಒಲವನ್ನು ಉಳಿಸಿಕೊಂಡರು. ಅವರನ್ನು ಮತ್ತೆ ಕಮ್ಯುನಿಸ್ಟ್ ಮಡಿಲಿಗೆ ತರಲು ಹಲವಾರು ಪ್ರಯತ್ನಗಳು ನಡೆದರೂ, ಅದು ಈಡೇರದ ಕನಸಾಗಿ ಉಳಿಯಿತು.

SCROLL FOR NEXT