ದೇಶ

ಹೈದರಾಬಾದ್ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ದಿವಂಗತ ಮಧುಕರ್ ಶೆಟ್ಟಿ ಹೆಸರು

Raghavendra Adiga

ಹೈದರಾಬಾದ್: ಹೈದರಾಬಾದ್ ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ಉಡುಪಿಯ ವಡ್ಡರ್ಸೆ ಮೂಲದ ಐಪಿಎಸ್ ಅಧಿಕಾರಿ ದಿವಂಗತ ಕೆ. ಮಧುಕರ್ ಶೆಟ್ಟಿ ಹೆಸರನ್ನಿಡಲಾಗಿದೆ.

ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದ ಮಧುಕರ್ ಶೆಟ್ಟಿಯವರ ಹೆಸರನ್ನು ಪೋಲೀಸ್ ಅಕಾಡೆಮಿ ಕೇಂದ್ರದ ಮುಖ್ಯ ಸಭಾಂಗಣಕ್ಕೆ ಇಟ್ಟಿರುವ ಬಗ್ಗೆ ಪೋಲೀಸ್ ಅಕಾಡೆಮಿ ಕೇಂದ್ರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಉಡುಪಿ ಜ್ಜಿಲ್ಲೆಯ ವಡ್ಡರ್ಸೆಯವರಾದ ಮಧುಕರ್ ಶೆಟ್ಟಿ 1999ರ ಬ್ಯಾಚ್ ಐಪಿಎಸ್  ಅಧಿಕಾರಿಯಾಗಿದ್ದರು. ಇವರು 2018 ಡಿಸೆಂಬರ್ ನಲ್ಲಿ ಅನಾರೋಗ್ಯದಿಂದಾಗಿ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಎಚ್1ಎನ್1 ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ 2018 ಡಿಸೆಂಬರ್ 28ಕ್ಕೆ ಇಹಕೋಕ ತ್ಯಜಿಸಿದ್ದರು.

ಕೆಲಸದಲ್ಲಿನ ಬದ್ದತೆ, ದಕ್ಷತೆ ಎಲ್ಲರಿಗೆ ಮಾದರಿಯಾಗಿತ್ತು ಈ ಕುರಿತು ಗೌರವಿಸಲಿಕ್ಕಾಗಿ ಮುಖ್ಯ ಸಭಾಂಗಣಕ್ಕೆ ಅವರ ಹೆಸರನ್ನಿಡಲು ತೀರ್ಮಾನಿಸಲಾಗಿದೆ ಎಂದು ಪೋಲೀಸ್ ಅಕಾಡೆಮಿ ಕೇಂದ್ರದ ಉಪನಿರ್ದೇಶಕ ಕೆಪಿಎಂ ಇಲಿಯಾಸ್ ಹೇಳಿದ್ದಾರೆ.

SCROLL FOR NEXT