ದೇಶ

ಕೋವಿಡ್-19 ನಿಂದ ಗುಣವಾಗಲು ಸೀಮೆಎಣ್ಣೆ ಕುಡಿದ ವ್ಯಕ್ತಿ ಸಾವು!

Raghavendra Adiga

ಭೋಪಾಲ್: ಕೊರೋನಾದಿಂದ ಗುಣಮುಖವಾಗುವ ಇಚ್ಚೆಯಿಂದ ಸೀಮೆಎಣ್ಣೆ ಸೇವಿಸಿದ ವ್ಯಕ್ತಿಯೊಬ್ಬ ಮೃತಪಟ್ಟಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮೃತನನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು ಈತನಿಗೆ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿತ್ತು. ಆದರೆ ತನಗೆ ಕೊರೋನಾ ಇದೆ ಎಂದು ಭಾವಿಸಿದ ಆತ ಸೀಮೆಎಣ್ಣೆ ಸೇವಿಸಿದರೆ ಕೊರೋನಾದಿಂದ ಗುಣವಾಗಬಹುದು ಎಂದು ನಂಬಿದ್ದಾನೆ. ಅದಕ್ಕಾಗಿ ಅದನ್ನು ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ.

ಆದರೆ ಮೃತ ಮಹೇಂದ್ರ ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ.

ಪೊಲೀಸರ ಪ್ರಕಾರ, ಮೃತ ಮಹೇಂದ್ರ ವೃತ್ತಿಯಲ್ಲಿ ದರ್ಜಿಯಾಗಿದ್ದ. ಅವನು ತನ್ನ ಕುಟುಂಬದೊಂದಿಗೆ ಭೋಪಾಲ್‌ನ ಶಿವನಗರ ಹಿನೋತಿಯಾ  ಪ್ರದೇಶದಲ್ಲಿ ವಾಸಿಸುತ್ತಿದ್ದ. ಮಹೇಂದ್ರ ತನಗೆ ತಾನೇ ಕೊರೋನಾ ರೋಗವಿದೆ ಎಂದು ಭಾವಿಸಿದ್ದ. ಸೀಮೆಎಣ್ಣೆ ಕುಡಿಯುವುದರಿಂದ ವೈರಸ್ ಅನ್ನು ನಾಶಪಡಿಸಬಹುದು ಎಂದು ಆತನಿಗೆ ನಂಬಿಕೆ ಇತ್ತು ಎಂದು  ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಹೇಂದ್ರ ಬುಧವಾರ ರಾತ್ರಿ 9 ಗಂಟೆಗೆ ಸೀಮೆಎಣ್ಣೆ ಸೇವಿಸಿದ್ದ. 

ಆದಾಗ್ಯೂ, ಮಹೇಂದ್ರ ಆರೋಗ್ಯ ಕೆಟ್ಟ ನಂತರ ಅವನ ಕುಟುಂಬ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಬೆಡ್ ಸಿಕ್ಕದೆ ಆಸ್ಪತ್ರೆ ಆಡಳಿತವು ಅವನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದೆ. ಆ ಬಳಿಕ ಕುಟುಂಬ ಅವನನ್ನು ಹಮೀದಿಯಾ ಆಸ್ಪತ್ರೆಗೆ ಸಾಗಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, “ಸುಮಾರು ಎರಡು ದಿನಗಳ ಹಿಂದೆ, ಅಹ್ಸೋಕಾ ಗಾರ್ಡನ್‌ನ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿದೆ ಎಂದು ಅವನ ಕುಟುಂಬ ಸದಸ್ಯರಿಗೆ ತಿಳಿಸಿದಾಗ, ಅವರು  ಅವನನ್ನು ಅಲ್ಲಿಗೆ ಸ್ಥಳಾಂತರಿಸಿದರು. ವೈದ್ಯರು ಶನಿವಾರ ಮಹೇಂದ್ರ ಸಾವನ್ನಪ್ಪಿದ್ದಾಗಿ ಘೋಷಿಸಿದರು”.

SCROLL FOR NEXT