ದೇಶ

ನಾರದಾ ವಿವಾದ: ಬಂಧನಕ್ಕೊಳಗಾಗಿದ್ದ ತೃಣಮೂಲ ಮುಖಂಡರಿಗೆ ಜಾಮೀನು, ಸಿಬಿಐ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಒತ್ತಾಯ

Nagaraja AB

ಕೊಲ್ಕತ್ತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರು ಮತ್ತು ಇತರರನ್ನು
ಬಂಧಿಸಿದ ನಂತರ ಪಶ್ಚಿಮ ಬಂಗಾಳದ ಸಿಬಿಐ ಕಚೇರಿಯ ಹೊರಗೆ ಸೋಮವಾರ ಟಿಎಂಸಿ ಕಾರ್ಯಕರ್ತರು ಲಾಕ್ ಡೌನ್
ನಿಯಮಗಳನ್ನು ಗಾಳಿಗೆ ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಹೈವೊಲ್ಟೇಜ್ ರಾಜಕೀಯ ಹೈಡ್ರಾಮವೇರ್ಪಟ್ಟಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯಾಂಗ ಬಂಧನಕ್ಕೆ ಮುಂದಾಗಿದ್ದರು.

ಈ ಮಧ್ಯೆ ಟಿಎಂಸಿಯ ನಾಲ್ವರು ಮುಖಂಡರಿಗೂ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ವಕೀಲರ ವಾದ ವಿವಾದ ಆಲಿಸಿದ ಬಳಿಕ ಹಿರಿಯ ಸಚಿವ ಸುಬ್ರಾತ್ ಮುಖರ್ಜಿ ಮತ್ತು ಫಿರ್ಹಾದ್  ಹಕೀಂ, ಶಾಸಕರಾದ ಮದನ್ ಮಿತ್ರಾ ಮತ್ತು ಮಾಜಿ ಸಚಿವ ಸೋವಾನ್ ಚಟರ್ಜಿ ಅವರಿಗೆ  ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಅನುಪಮ್ ಮುಖರ್ಜಿ ಜಾಮೀನು ನೀಡಿದ್ದಾರೆ ಎಂದು ವಕೀಲ ಅನಿಂದ್ಯಾ ರಾವತ್ ಹೇಳಿದ್ದಾರೆ.

ಟಿಎಂಸಿ ಮುಖಂಡರ ಬಂಧನ ವಿರೋಧಿಸಿ ಸಿಬಿಐ ಕಚೇರಿ ಹೊರಗಡೆ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಟಿಎಂಸಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.ಹೂಗ್ಲಿ, ಉತ್ತರ 24 ಪರಗಣ, ದಕ್ಷಿಣ 245 ಪರಗಣ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿ, ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಾರದಾ ಕುಟುಕು ಕಾರ್ಯಾಚರಣೆಯಲ್ಲಿ ರಾಜಕಾರಣಿಗಳು ಹಣ ಪಡೆಯುವುದು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣದಲ್ಲಿ 
ಮಾಜಿ ಸಚಿವ ಸೋವಾನ್ ಚಟರ್ಜಿ ಸೇರಿದಂತೆ ನಾಲ್ವರು ಸಿಬಿಐ ಮುಖಂಡರನ್ನು ಸಿಬಿಐ ಸೋಮವಾರ ಬೆಳಗ್ಗೆ ಬಂಧಿಸಿತ್ತು.ಬೆಳಗ್ಗೆ 11 ಗಂಟೆ ವೇಳೆಗೆ ಸಿಬಿಐ ಕಚೇರಿಗೆ ಆಗಮಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಿಜಾಮ್ ಪ್ಯಾಲೇಸ್ ನಿಂದ ಹೊರ ಹೋಗಲು ಬಯಸಿದರೆ ತನನ್ನು ಬಂಧಿಸುವಂತೆ ನಮ್ಮ ಅಧಿಕಾರಿಗಳಿಗೆ ಹೇಳಿದರು ಎಂದು ಕೇಂದ್ರಿಯ ತನಿಖಾ ತಂಡದ ಮೂಲಗಳು ಹೇಳಿವೆ. ಮುಖ್ಯಮಂತ್ರಿಯ ಕ್ರಮಗಳು ಕಲ್ಕತ್ತಾ ಹೈಕೋರ್ಟ್ ನಿಂದ  ಸಿಬಿಐಗೆ ವಹಿಸಲಾದ ತನಿಖೆಯಲ್ಲಿ ಹಸ್ತಕ್ಷೇಪವಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ.

ಅಕ್ರಮವಾಗಿ ಪಕ್ಷದ ಮೂರು ಹಿರಿಯ ಮುಖಂಡರನ್ನು ಬಂಧಿಸಿರುವುದರ ವಿರುದ್ಧ ಸಿಬಿಐ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೊಲ್ಕತ್ತಾ ಪೊಲೀಸ್ ಆಯುಕ್ತ ಸೌಮೆನ್ ಮಿತ್ರಾ ಅವರಿಗೆ ಟಿಎಂಸಿ ಸೋಮವಾರ ಪತ್ರ ಬರೆದಿದೆ. ಪಕ್ಷದ ಪರವಾಗಿ ಪತ್ರ ಬರೆದಿರುವ ಸಚಿವೆ ಹಾಗೂ ಪಶ್ಚಿಮ ಬಂಗಾಳ ತೃಣಮೂಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಮ ಭಟ್ಟಾಚಾರ್ಯ, ಎಫ್ ಐಆರ್ ಹಾಕಲು ಒತ್ತಾಯಿಸಿದ್ದಾರೆ. ಬಂಧನಕ್ಕೂ ಮುಂಚೆ ವಾರೆಂಟ್ ಹೊರಡಿಸಬೇಕು ಮತ್ತು ಸ್ಪೀಕರ್ ಅವರಿಂದ
ಅನುಮತಿ ಪಡೆಯಬೇಕೆಂದು ಅವರು ಹೇಳಿದ್ದಾರೆ.

SCROLL FOR NEXT