ದೇಶ

ತೌಕ್ತೆ ಚಂಡಮಾರುತ ಎದುರಿಸಲು ಸಶಸ್ತ್ರ ಪಡೆಗಳ ಸಿದ್ಧತೆ ಪರಿಶೀಲಿಸಿದ ರಾಜನಾಥ್ ಸಿಂಗ್ 

Nagaraja AB

ನವದೆಹಲಿ: ತೌಕ್ತೆ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿ ನಿಭಾಯಿಸಲು ಸಶಸ್ತ್ರ ಪಡೆ ಅಧಿಕಾರಿಗಳ ಸಿದ್ಧತೆಯನ್ನು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು.

ಚಂಡಮಾರುತ ಪೀಡಿತ ರಾಜ್ಯಗಳ ಅಧಿಕಾರಿಗಳ ಯಾವುದೇ ಕೋರಿಕೆಯ ಸಂದರ್ಭದಲ್ಲಿ ಒದಗಿಸಲು 11 ಭಾರತೀಯ ನೌಕಾಪಡೆಯ ಡೈವಿಂಗ್ ತಂಡಗಳನ್ನು ಸಿದ್ಧವಾಗಿರಿಸಲಾಗಿದೆ.ಆದರೆ 12 ಪ್ರವಾಹ ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ತಂಡಗಳನ್ನು ತಕ್ಷಣದ ಪ್ರತಿಕ್ರಿಯೆ ಮತ್ತು ನಿಯೋಜನೆಗಾಗಿ ಮೀಸಲಿಡಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. 

ಚಂಡಮಾರುತದಿಂದ ಭಾದಿತವಾದ ರಾಜ್ಯಗಳು ಮನವಿ ಮಾಡಿದಲ್ಲಿ ನೆರವಿಗಾಗಿ ನೌಕಾಪಡೆಯ 11 ಈಜು ತಂಡಗಳನ್ನು ಸಜ್ಜುಗೊಳಿಸಲಾಗಿದೆ. ತ್ವರಿತ ನಿರ್ವಹಣೆ ಮತ್ತು ನಿಯೋಜನೆಗಾಗಿ 12 ಪ್ರವಾಹ ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ತಂಡಗಳನ್ನು ಕಾಯ್ದಿರಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ರಾಜ್‍ ನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ.

ಚಂಡಮಾರುತ ಬೀಸಿದ ನಂತರ ತ್ವರಿತ ಮೂಲ ಸೌಕರ್ಯ ದುರಸ್ತಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ದುರಸ್ತಿ ಮತ್ತು ರಕ್ಷಣಾ ತಂಡಗಳನ್ನೂ ರಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ತಲ್ವಾರ್, ತಾರ್ ಕಾಶ್‍ ಮತ್ತು ತಬರ್ ನೌಕೆಗಳನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ ನೌಕಾ ಪಡೆ ಅಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ.

ಸಭೆಯಲ್ಲಿ ಭದ್ರತಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್‍ ರಾವತ್‍, ರಕ್ಷಣಾ ಕಾರ್ಯದರ್ಶಿ ಡಾ ಅಜಯ್‍ ಕುಮಾರ್‍, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‍ ಕರಮ್‍ ಬಿರ್ ಸಿಂಗ್, ವಾಯಪಡೆ ಮುಖ್ಯಸ್ಥ ಏರ್ ಚೀಫ್‍ ಮಾರ್ಷಲ್‍ ಆರ್ ಕೆಎಸ್ ಭದೌರಿಯಾ ಮತ್ತು ಭೂಸೇನಾ ಮುಖ್ಯಸ್ಥ ಎಂ ಎಂ ನರಾವಣೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಡಿಆರ್ ಡಿಒ ಮುಖ್ಯಸ್ಥರು ಪಾಲ್ಗೊಂಡಿದ್ದರು.

SCROLL FOR NEXT