ದೇಶ

ಪಿಣರಾಯಿ ವಿಜಯನ್ ಪ್ರಮಾಣವಚನ ಕಾರ್ಯಕ್ರಮ ಬಹಿಷ್ಕರಿಸಲು ವಿಪಕ್ಷ ಯುಡಿಎಫ್ ನಿರ್ಧಾರ

Srinivas Rao BV

ತಿರುವನಂತಪುರಂ: ಕೇರಳದ ನಿಯೋಜಿತ ಸಿಎಂ ಪಿಣರಾಯಿ ವಿಜಯನ್ ಅವರು ಎರಡನೇ ಬಾರಿಗೆ ಸಿಎಂ ಆಗಿ ಗುರುವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದು ಈ ಕಾರ್ಯಕ್ರಮವನ್ನು ವಿಪಕ್ಷ ಯುಡಿಎಫ್ ಬಹಿಷ್ಕರಿಸಲು ನಿರ್ಧರಿಸಿದೆ. 

"ಕೇರಳದಲ್ಲಿ ಟ್ರಿಪಲ್ ಲಾಕ್ ಡೌನ್ ಇದ್ದರೂ ಸಹ ತಿರುವನಂತಪುರಂ ನ ಸೆಂಟ್ರಲ್ ಸ್ಟೇಡಿಯಂ ನಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ 500 ಮಂದಿ ಭಾಗವಹಿಸುತ್ತಿರುವುದನ್ನು ಯುಡಿಎಫ್ ವಿರೋಧಿಸಿದ್ದು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದೆ" ಎಂದು ಯುಡಿಎಫ್ ಸಂಚಾಲಕ ಎಂಎಂ ಹಸನ್ ಹೇಳಿದ್ದಾರೆ.  

ವಿಪಕ್ಷ ನಾಯಕರು ವರ್ಚ್ಯುಯಲ್ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ ಎಂದೂ ಹಸನ್ ಮಾಹಿತಿ ನೀಡಿದ್ದಾರೆ. ಹಲವಾರು ವಿರೋಧಗಳ ನಡುವೆಯೂ ಬೃಹತ್ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಪಿಣರಾಯಿ ವಿಜಯನ್ ಸರ್ಕಾರ ಆಯೋಜಿಸಿದ್ದು, ಆಡಳಿತ ವಿಭಾಗ 500 ಪಾಸ್ ಗಳಿಗೆ ವ್ಯವಸ್ಥೆ ಮಾಡಿದೆ. 

ಈ ಕಾರಣಕ್ಕಾಗಿ ವಿಪಕ್ಷ ಯುಡಿಎಫ್ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ. "ಬೃಹತ್ ಕಾರ್ಯಕ್ರಮದಲ್ಲಿ 500 ಮಂದಿ ಭಾಗಿಯಾಗುವ ಬದಲು ಸರಳ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಸಿಎಂ ಪ್ರಮಾಣವಚನ ಸ್ವೀಕರಿಸಬಹುದಿತ್ತು" ಎಂಬುದು ಯುಡಿಎಫ್ ನ ವಾದ.

SCROLL FOR NEXT