ದೇಶ

ಪರಂ ಬಿರ್ ಸಿಂಗ್ ಅರ್ಜಿ ವಿಚಾರಣೆಯಿಂದ ಹಿಂದೆಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ

Srinivas Rao BV

ನವದೆಹಲಿ: ತಮ್ಮ ವಿರುದ್ಧದ ಎಲ್ಲಾ ತನಿಖೆಗಳನ್ನು ಮಹಾರಾಷ್ಟ್ರದಿಂದ ಹೊರಗೆ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ವಹಿಸಬೇಕೆಂಬ ಮುಂಬೈ ನ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಅವರ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹಿಂದೆ ಸರಿದಿದ್ದಾರೆ. 

ಸುಪ್ರೀಂ ಕೊರ್ಟ್ ನ ರಜೆ ಪೀಠದಲ್ಲಿದ್ದ ನ್ಯಾ.ವಿನೀತ್ ಶರಣ್, ಗವಾಯಿ ಅವರ ಎದುರು ಈ ಅರ್ಜಿ ವಿಚಾರಣೆಗೆ ಬಂದಿತ್ತು. ನ್ಯಾ. ಗವಾಯಿ ಅವರಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾವುದೋ ಸಮಸ್ಯೆ ಇದೆ ಆದ್ದರಿಂದ ಇದನ್ನು ಬೇರೆ ಪೀಠದ ಎದುರು ಸಲ್ಲಿಸುವಂತೆ ಹೇಳುತ್ತೇವೆ ಎಂದು ನ್ಯಾ.ಶರಣ್ ಹೇಳಿದ್ದಾರೆ. 

"ನಾನು ಈ ವಿಚಾರಣೆ ನಡೆಸಲು ಸಾಧ್ಯವಿಲ್ಲ" ಎಂದು ನ್ಯಾ. ಗವಾಯಿ ಹೇಳಿದ್ದಾರೆ. ಸಿಂಗ್ ಅವರ ಪರ ವಾದ ಮಂಡಿಸುತ್ತಿರುವ ಹಿರಿಯ ಅಡ್ವೊಕೇಟ್ ಪುನೀತ್ ಬಲಿ, ಪರಮ್ ಬಿರ್ ಸಿಂಗ್ ಅವರ ವಿರುದ್ಧದ ತನಿಖೆಗಳು ಅವರನ್ನು ಹಣಿಯುವುದಕ್ಕಾಗಿ ಆದೇಶಿಸಿದ್ದಾಗಿದೆ. ಇದು ಸುಪ್ರೀಂ ಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧವಾಗಿದೆ ಎಂದು ವಾದ ಮಂಡಿಸಿದ್ದಾರೆ. 

1988 ಬ್ಯಾಚ್ ನ ಐಪಿಎಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಮಹಾರಾಷ್ಟ್ರದ ಗೃಹ ಸಚಿವ ಎನ್ ಸಿಪಿ ನಾಯಕ ಅನಿಲ್ ದೇಶ್ ಮುಖ್ ಅವರ ವಿರುದ್ಧ ಅಕ್ರಮ, ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕಾಗಿ ಅವರನ್ನು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಹೋಮ್ ಗಾರ್ಡ್ ನ ಜನರಲ್ ಕಮಾಂಡರ್ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. 

SCROLL FOR NEXT