ಬಾಬಾ ರಾಮದೇವ್ 
ದೇಶ

ಟೂಲ್‌ಕಿಟ್‌ ಬಳಸಿ ಕುಂಭಮೇಳ ಹಾಗೂ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಪ್ರಯತ್ನ ನಡೆಯುತ್ತಿದೆ: ರಾಮದೇವ್

ಟೂಲ್‌ಕಿಟ್‌ ಸಹಾಯದಿಂದ ಕುಂಭಮೇಳ ಮತ್ತು ಹಿಂದೂ ಧರ್ಮವನ್ನು ಅಪಚಾರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದು ಇದೊಂದು 'ರಾಜಕೀಯ ಪಿತೂರಿ' ಎಂದು ಹೇಳಿದ್ದಾರೆ. 

ಹರಿದ್ವಾರ್: ಟೂಲ್‌ಕಿಟ್‌ ಸಹಾಯದಿಂದ ಕುಂಭಮೇಳ ಮತ್ತು ಹಿಂದೂ ಧರ್ಮವನ್ನು ಅಪಚಾರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದು ಇದೊಂದು "ರಾಜಕೀಯ ಪಿತೂರಿ" ಎಂದು ಹೇಳಿದ್ದಾರೆ. 

ಕುಂಭಮೇಳವನ್ನು ಕೋವಿಡ್ 19 'ಸೂಪರ್ ಸ್ಪ್ರೆಡರ್' ಎಂದು ನಿಂದಿಸಲು ಕಾಂಗ್ರೆಸ್ ಟೂಲ್ಕಿಟ್ ವಿನ್ಯಾಸಗೊಳಿಸಿದೆ ಎಂದು ಬಿಜೆಪಿ ಆರೋಪಿಸಿದ ದಿನದ ನಂತರ ರಾಮದೇವ್ ಈ ಹೇಳಿಕೆ ನೀಡಿದ್ದಾರೆ. 

ದೇಶಕ್ಕೆ ವಿರುದ್ಧವಾಗಿರುವ 'ಅಂತಹ ಶಕ್ತಿಗಳನ್ನು' ಬಹಿಷ್ಕರಿಸುವಂತೆ ಜನರನ್ನು ರಾಮದೇವ್ ಒತ್ತಾಯಿಸಿದರು. 'ಟೂಲ್ಕಿಟ್ ಸಹಾಯದಿಂದ ಕುಂಭಮೇಳ ಮತ್ತು ಹಿಂದೂ ಧರ್ಮದ ಚಿತ್ರಣವನ್ನು ಕೆಡಿಸುವುದು ರಾಜಕೀಯ ಪಿತೂರಿ. ಈ ವಿಷಯವನ್ನು ರಾಜಕೀಯಗೊಳಿಸಿ, ಆದರೆ 100 ಕೋಟಿ ಹಿಂದೂಗಳಿಗೆ ಅಗೌರವ ಮಾಡಬೇಡಿ ಎಂದು ವಿನಂತಿಸುತ್ತೇನೆ. ಇನ್ನು ದೇಶಕ್ಕೆ ವಿರುದ್ಧವಾಗಿರುವ ಅಂತಹ ಶಕ್ತಿಯನ್ನು ಬಹಿಷ್ಕರಿಸಿ, ಜೊತೆಗೆ ಇಂತಹವರ ವಿರುದ್ಧ ನಿಲ್ಲುವಂತೆ ಜನರನ್ನು ಕೋರುತ್ತೇನೆ ಎಂದು ಯೋಗ ಗುರು ಹೇಳಿದ್ದಾರೆ. 

ಹಿಂದಿನ ದಿನ, ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವದೇಶಾನಂದ ಗಿರಿ ಜೀ ಅವರು ಕುಂಭಮೇಳವನ್ನು ರಾಜಕೀಯಗೊಳಿಸಬಾರದು ಎಂದು ಜನರನ್ನು ಒತ್ತಾಯಿಸಿದರು. ರಾಷ್ಟ್ರದ ಸಂಸ್ಕೃತಿ, ಆಚರಣೆಗಳು, ನಂಬಿಕೆ ಮತ್ತು ಸಂಪ್ರದಾಯಗಳನ್ನು "ಯೋಜಿತ ರೀತಿಯಲ್ಲಿ" ಕಳಂಕಿತಗೊಳಿಸಲಾಗುತ್ತಿದೆ ಎಂದು ಹೇಳಿದರು. 

ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಒ) ಸೂಚನೆಗೆ ವಿರುದ್ಧವಾಗಿ ಕೋವಿಡ್ ರೂಪಾಂತರಿಯನ್ನು 'ಇಂಡಿಯನ್ ಸ್ಟ್ರೈನ್' ಅಥವಾ 'ಮೋದಿ ತಳಿ' ಎಂದು ಕರೆಯುವ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಟೂಲ್ಕಿಟ್ ಸೂಚನೆಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಡಾಕ್ಟರ್ ಸೇರಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: 2 ದಿನದಲ್ಲಿ 150 ಬಾಂಬ್ ಗಳು ಪತ್ತೆ, ಬಂಗಾಳದಲ್ಲಿ ಕಾರ್ಯಾಚರಣೆಗಿಳಿದ BSF

ಅಸ್ಸಾಂ: ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ; 600ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಥಳಾಂತರ ಭೀತಿ

ಸರಗೂರು: ಮನುಷ್ಯರ, ದನಗಳ ಕೊಂದಿದ್ದ ಹುಲಿ ಕೊನೆಗೂ ಸೆರೆ; ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?

SCROLL FOR NEXT