ದೇಶ

ಸುವೇಂದು ಅಧಿಕಾರಿಯ ತಂದೆ, ಸಹೋದರನಿಗೆ ವಿಐಪಿ ಭದ್ರತೆ ನೀಡಿದ ಕೇಂದ್ರ

Lingaraj Badiger

ನವದೆಹಲಿ: ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೆೇಂದು ಅಧಿಕಾರಿಯ ತಂದೆ ಮತ್ತು ಸಹೋದರ ಇಬ್ಬರೂ ಸಂಸತ್ ಸದಸ್ಯರಾಗಿದ್ದು, ಕೇಂದ್ರ ಗೃಹ ಸಚಿವಾಲಯ ಅವರಿಗೆ ಕೇಂದ್ರ ರಕ್ಷಣಾ ಪಡೆಗಳಿಂದ 'ವೈ +' ಭದ್ರತೆ ನೀಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಸುವೇಂದು ಅಧಿಕಾರಿಯ ತಂದೆ ಸಿಸಿರ್ ಕುಮಾರ್ ಅಧಿಕಾರಿ ಮತ್ತು ಸಹೋದರ ದಿಬ್ಯೆಂದು ಅಧಿಕಾರಿಗೆ ಜೀವ ಬೆದರಿಕೆ ಇರುವ ವರದಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಹೆಚ್ಚಿನ ಭದ್ರತೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಸಿಸಿರ್ ಕುಮಾರ್ ಅಧಿಕಾರಿ ಅವರು ಕಾಂತಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ದಿಬ್ಯೆಂದು ಅಧಿಕಾರಿ ರಾಜ್ಯದ ತಮ್ಲುಕ್‌ ಕ್ಷೇತ್ರದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದರಾಗಿದ್ದಾರೆ.

ಈ ಇಬ್ಬರು ಸಂಸದರು ಎದುರಿಸುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಉಭಯ ನಾಯಕರಿಗೆ 'ವೈ +' ಭದ್ರತೆ ನೀಡುವಂತೆ ಶಿಫಾರಸು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

SCROLL FOR NEXT