ದೇಶ

ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಮನೆಯಲ್ಲಿ ಕಪ್ಪು ಧ್ವಜ ಹಾರಿಸಿದ ನವಜೋತ್ ಸಿಂಗ್ ಸಿಧು

Srinivas Rao BV

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಮುಂದುವರೆಸಿರುವ ರೈತರನ್ನು ಬೆಂಬಲಿಸಿ ಪಂಜಾಬ್ ಕಾಂಗ್ರೆಸ್ ನ ಶಾಸಕ ನವಜೋತ್ ಸಿಂಗ್ ಸಿಧು ಪಟಿಯಾಲದಲ್ಲಿರುವ ತಮ್ಮ ನಿವಾಸದ ಮೇಲೆ ಕಪ್ಪು ಧ್ವಜ ಹಾರಿಸಿದ್ದಾರೆ.

ಪ್ರತಿಭಟನೆಯ ಭಾಗವಾಗಿ ಮನೆಯಲ್ಲಿಯೇ ಕಪ್ಪುಧ್ವಜ ಹಾರಿಸುತ್ತಿದ್ದೇನೆ, ಪ್ರತಿಯೊಬ್ಬ ಪಂಜಾಬಿಯೂ ರೈತರನ್ನು ಬೆಂಬಲಿಸಬೇಕು ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ಕಿರು ವಿಡಿಯೋ ಕ್ಲಿಪ್ ನ್ನು ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿರುವ ಸಿಧು, ತಮ್ಮ ಪತ್ನಿ ನವ್ಜೋತ್ ಕೌರ್ ಸಿಧು ಅವರೊಂದಿಗೆ ಆರೋಹಣ ಮಾಡಿರುವ "ಕಪ್ಪು ಧ್ವಜ ಕೃಷಿ ಕಾಯ್ದೆಯ ವಿರೋಧದ ಸಂಕೇತ" ಎಂದು ಹೇಳಿದ್ದಾರೆ.

ಪಂಜಾಬ್ ಕೃಷಿ ಸಮುದಾಯವನ್ನು ಸಂಪೂರ್ಣ ನಾಶ ಮಾಡುವ ಮೂರು ಕರಾಳ ಕಾಯ್ದೆಗಳ ವಿರುದ್ಧ ಹೋರಾಡುತ್ತಿದೆ. ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು 6 ತಿಂಗಳಾದ ಹಿನ್ನೆಲೆಯಲ್ಲಿ ಕೃಷಿ ಸಂಘಟನೆಗಳು ಮೇ.26 ರಂದು ಕರಾಳ ದಿನವನ್ನಾಗಿ ಆಚರಣೆ ಮಾಡಲು ಕರೆ ನೀಡಿವೆ.

2020 ರ ನವೆಂಬರ್ ನಿಂದ ದೆಹಲಿ ಗಡಿ ಭಾಗದಲ್ಲಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚ (ಎಸ್ ಕೆಎಂ) ಪ್ರತಿಭಟನೆಯಲ್ಲಿ ನಿರತವಾಗಿವೆ.

SCROLL FOR NEXT