ದೇಶ

ಕೊಲೆ ಆರೋಪ ಸಂಬಂಧ ತನಿಖೆ: ರೆಸ್ಲರ್ ಸುಶೀಲ್ ಕುಮಾರ್ ರನ್ನು ಅಮಾನತು ಮಾಡಿದ ಭಾರತೀಯ ರೈಲ್ವೇ

Srinivasamurthy VN

ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರ ವಿರುದ್ಧ ಕ್ರಿಮಿನಲ್ ಅಪರಾಧ ತನಿಖೆ ನಡೆಯುತ್ತಿರುವುದರಿಂದ ಅವರನ್ನು ಇಲಾಖೆಯಿಂದ ಅಮಾನತು ಮಾಡಲಾಗಿದೆ ಎಂದು ಭಾರತೀಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೀಡಾವಿಭಾಗದಲ್ಲಿ ರೆಸ್ಲರ್ ಸುಶೀಲ್ ಕುಮಾರ್ ಅವರಿಗೆ ಉತ್ತರ ರೈಲ್ವೆಯಲ್ಲಿ ಕೆಲಸ ನೀಡಲಾಗಿತ್ತು. ಆದರೆ ಸುಶೀಲ್ ಕುಮಾರ್ ಅವರ ವಿರುದ್ಧ ಕ್ರಿಮಿನಲ್ ಅಪರಾಧ ತನಿಖೆ ನಡೆಯುತ್ತಿರುವುದರಿಂದ ಅವರನ್ನು ಇಲಾಖೆಯಿಂದ ಅಮಾನತು ಮಾಡಲಾಗಿದೆ ಎನ್ನಲಾಗಿದೆ. 

ದೆಹಲಿಯಲ್ಲಿ ಕುಸ್ತಿಪಟು ಸಾವಿಗೆ ಕಾರಣವಾದ ಛತ್ರಸಲ್ ಸ್ಟೇಡಿಯಂ ಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಶೀಲ್ ಕುಮಾರ್ (38 ವರ್ಷ) ಮತ್ತು ಅವರ ಸಹವರ್ತಿ ಅಜಯ್, ಅಲಿಯಾಸ್ ಸುನಿಲ್ (48 ವರ್ಷ) ಅವರನ್ನು ಪಂಜಾಬ್ ನ ಮುಂಡ್ಕಾದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪಿ ಎಸ್ ಕುಶ್ವಾ ತಿಳಿಸಿದ್ದಾರೆ.

ಈ ಹಿಂದೆ ಪರಾರಿಯಾಗಿದ್ದ ಸುಶೀಲ್ ಕುಮಾರ್ ಬಂಧನಕ್ಕೆ ಬಲೆ ಬೀಸಿದ್ದ ದೆಹಲಿ ಪೊಲೀಸರು ಮಾಹಿತಿ ನೀಡಿದವರಿಗೆ 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು.  

SCROLL FOR NEXT