ಸುಶೀಲ್ ಕುಮಾರ್ 
ದೇಶ

ಛತ್ರಾಸಲ್ ಸ್ಟೇಡಿಯಂ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ನ ನಾಲ್ವರು ಸಹಚರರ ಬಂಧನ

ದೆಹಲಿಯ ಕ್ರಿಡಾಂಗಣದಲ್ಲಿ ನಡೆದ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ಅವರ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.

ನವದೆಹಲಿ: ದೆಹಲಿಯ ಕ್ರಿಡಾಂಗಣದಲ್ಲಿ ನಡೆದ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ಅವರ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.

ಬಂಧಿತ ನಾಲ್ವರು ಸುಶೀಲ್ ಕುಮಾರ್ ಅವರ ಸಹಚರರಾಗಿದ್ದು ಸಾಗರ್ ಕೊಲೆ ಪ್ರಕರಣದಲ್ಲಿ ಅವರನ್ನು ಕಾಂಜ್ವಾಲಾ ಪ್ರದೇಶದಿಂದ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಸಂಬಂಧ ನಡೆದ ಪಿತೂರಿ ಮತ್ತು ಸನ್ನಿವೇಶಗಳ ಬಗ್ಗೆ ಎಲ್ಲಾ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ, ಈ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸುವುದು ಮಾತ್ರ ಬಾಕಿಯಿದೆ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ವರು ಆರೋಪಿಗಳನ್ನು ಭೂಪೇಂದರ್ ಅಲಿಯಾಸ್ ಭೂಪಿ, ಮೋಹಿತ್ ಅಲಿಯಾಸ್ ಭೋಲಿ, ಗುಲಾಬ್ ಅಲಿಯಾಸ್ ಪಹ್ಲ್ವಾನ್ ಮತ್ತು ಮಜೀತ್ ಅಲಿಯಾಸ್ ಚುನ್ನಿಲ್ ಲಾಲ್ ಎಂದು ಗುರುತಿಸಲಾಗಿದೆ, ನಾಲ್ವರೂ ಹರಿಯಾಣ ನಿವಾಸಿಗಳಾಗಿದ್ದು, ಅವರು ಕಲಾ ಅಸೌಡಾ-ನೀರಜ್ ಬವಾನಾ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದಾರೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ರೋಹಿಣಿ ಜಿಲ್ಲಾ ದೆಹಲಿ ಪೊಲೀಸ್ ವಿಶೇಷ ಸಿಬ್ಬಂದಿ ಗೆವೆರಾ ರೈಲ್ವೆ ಕ್ರಾಸಿಂಗ್ ಬಳಿ ಬಲೆ ನಾಲ್ವರನ್ನು ಬಂಧಿಸಿದ್ದಾರೆ. "ನಾಲ್ವರು ಆರೋಪಿಗಳು ಮೇ 4 ರ ಮಧ್ಯರಾತ್ರಿಯಲ್ಲಿ ಅವರು ಛತ್ರಾಸಲ್ ಕ್ರೀಡಾಂಗಣಕ್ಕೆ ಹೋಗಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಘಟನೆಗಳ ಅನ್ವಯ ಅಪರಾಧದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ವಿವರಗಳನ್ನು ಅವರು ಬಹಿರಂಗ ಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 4 ರಂದು ಕುಸ್ತಿಪಟುಗಳ ನಡುವೆ ಜಗಳ ನಡೆದ ಘಟನೆ ವರದಿಯಾಗಿದ್ದು, ಇದರಲ್ಲಿ ಕೆಲವು ಕುಸ್ತಿಪಟುಗಳು ಗಾಯಗೊಂಡಿದ್ದರು ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!