ದೇಶ

ಅಪೊಲೊ ಆಸ್ಪತ್ರೆ ಸಮೂಹದಿಂದ ಜೂನ್‌ನಿಂದ ಸ್ಪುಟ್ನಿಕ್ ಲಸಿಕೆ ವಿತರಣೆ ಪ್ರಾರಂಭ

Raghavendra Adiga

ನವದೆಹಲಿ: ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್ ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಜೂನ್ ಎರಡನೇ ವಾರದಿಂದ ಭಾರತದ ತನ್ನ ಆಸ್ಪತ್ರೆಗಳಲ್ಲಿ ನೀಡಲು ಪ್ರಾರಂಭಿಸುವುದಾಗಿ ಘೋಷಿಸಿದೆ. ಒಂದು ಡೋಸ್ ವ್ಯಾಕ್ಸೀನ್ ಗೆ ಅಂದಾಜು 1,195 ರೂ.ದರ ನಿಗದಿಪಡಿಸಲಾಗಿದೆ.

ಲಸಿಕೆಗಾಗಿ 995 ರೂ, ಮತ್ತು 200 ರೂ. ಆಡಳಿತ ಶುಲ್ಕ ವಿಧಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಅಪೊಲೊ ಸಮೂಹದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪೊಲೊ ಆಸ್ಪತ್ರೆ ಜೂನ್ ಎರಡನೇ ವಾರದಿಂದ ಸ್ಪುಟ್ನಿಕ್ ವಿ ವಿತರಣೆ ಪ್ರಾರಂಭಿಸುವುದಾಗಿ ಗುರುವಾರ ತಿಳಿಸಿವೆ.

ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶೋಬಾನಾ ಕಾಮಿನೇನಿ ಅವರು ಹೇಳುವಂತೆ, ಈ ಗ್ರೂಪ್ ಭಾರತದ 80 ಸ್ಥಳಗಳಲ್ಲಿ ಒಂದು ಮಿಲಿಯನ್ ಲಸಿಕೆ ಡೋಸ್ ನೀಡುವುದನ್ನು ಪೂರ್ಣಗೊಳಿಸಿದೆ ಮತ್ತು ಮುಂಚೂಣಿ ಕಾರ್ಯಕರ್ತರು, ಹೆಚ್ಚಿನ ಅಪಾಯದಲ್ಲಿರುವ ಸಾರ್ವಜನಿಕರು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಆದ್ಯತೆ ನೀಡಲಾಗಿದೆ. ತಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಹೆಚ್ಚಿಸುವ ಬಗ್ಗೆ ವಿವರಗಳನ್ನು ನೀಡಿದ ಕಾಮಿನೇನಿ, "ಜೂನ್‌ನಲ್ಲಿ ನಾವು ಪ್ರತಿ ವಾರ ಒಂದು ಮಿಲಿಯನ್ ಗುರಿ ತಲುಪುತ್ತೇವೆ. ಜುಲೈನಲ್ಲಿ ಅದನ್ನು ದ್ವಿಗುಣಗೊಳಿಸುತ್ತೇವೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ 20 ಮಿಲಿಯನ್ ಡೋಸ್ ಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿದ್ದೇವೆ" ಎಂದು ಹೇಳಿದರು.

ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಲಸಿಕೆ ವಿತರಣೆ ಈ ತಿಂಗಳ ಆರಂಭದಲ್ಲಿ ದೇಶದಲ್ಲಿ ಪ್ರಾರಂಭವಾಗಿದ್ದರಿಂದ ಭಾರತವು ಲಸಿಕೆ ಅಭಿಯಾನದಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಮೊದಲೇ ವರದಿ ಮಾಡಿದಂತೆ, ಭಾರತ ಮತ್ತು ರಷ್ಯಾ ಪ್ರತಿ ತಿಂಗಳು ಸುಮಾರು 35-40 ಮಿಲಿಯನ್ ಡೋಸ್‌ಗಳನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಿಂದ ವಿತರಣೆಗೆ ಪ್ರಾರಂಭಿಸಲು ಯೋಜಿಸುತ್ತಿವೆ.

SCROLL FOR NEXT