ಬ್ಲಿಂಕೆನ್- ಎಸ್ ಜೈಶಂಕರ್ ಭೇಟಿ 
ದೇಶ

ಬ್ಲಿಂಕೆನ್ ಭೇಟಿ ಮಾಡಿದ ಜೈಶಂಕರ್: ಕೋವಿಡ್ ಪರಿಹಾರ, ಭಾರತ-ಪೆಸಿಫಿಕ್‍ ವಿಷಯಗಳ ಚರ್ಚೆ

ಅಮೆರಿಕ ಪ್ರವಾದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್‍ ಅವರನ್ನು ಭೇಟಿ ಮಾಡಿ, ಕೋವಿಡ್-19 ಪರಿಹಾರ, ಮ್ಯಾನ್ಮಾರ್ ನಲ್ಲಿ ಕ್ಷಿಪ್ರಕ್ರಾಂತಿ, ಹವಾಮಾನ ಬದಲಾವಣೆ ಮತ್ತು ಭಾರತ-ಫೆಸಿಫಿಕ್‍ ಪ್ರಾಂತ್ಯದಲ್ಲಿ ಸಹಕಾರ ಬಲವರ್ಧನೆ ಬಗ್ಗೆ ಚರ್ಚಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಪ್ರವಾದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್‍ ಅವರನ್ನು ಭೇಟಿ ಮಾಡಿ, ಕೋವಿಡ್-19 ಪರಿಹಾರ, ಮ್ಯಾನ್ಮಾರ್ ನಲ್ಲಿ ಕ್ಷಿಪ್ರಕ್ರಾಂತಿ, ಹವಾಮಾನ ಬದಲಾವಣೆ ಮತ್ತು ಭಾರತ-ಫೆಸಿಫಿಕ್‍ ಪ್ರಾಂತ್ಯದಲ್ಲಿ ಸಹಕಾರ ಬಲವರ್ಧನೆ ಬಗ್ಗೆ ಚರ್ಚಿಸಿದ್ದಾರೆ.

‘ಭಾರತದ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರೊಂದಿಗೆ ನಡೆಸಿದ ಚರ್ಚೆಯಲ್ಲಿ ವಿದೇಶಾಂಗ ಸಚಿವ ಆಂಟೊನಿ ಜೆ ಬ್ಲಿಂಕೆನ್‍, ಭಾರತ-ಅಮೆರಿಕ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಿಸುವ ಅಮೆರಿಕದ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ. ಇಬ್ಬರೂ ನಾಯಕರು ಕೋವಿಡ್ ಪರಿಹಾರ, ಕ್ವಾಡ್ ಮೂಲಕ ಭಾರತ-ಫೆಸಿಪಿಕ್‍ ಸಹಕಾರ ಬಲಪಡಿಸುವ ಪ್ರಯತ್ನಗಳು, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ಸಹಕಾರ ವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್‍ ಪ್ರೈಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮ್ಯಾನ್ಮಾರ್ (ಬರ್ಮಾ)ನಲ್ಲಿ ಕ್ಷಿಪ್ರಕ್ರಾಂತಿ, ಪ್ರಾದೇಶಿಕ ಬೆಳವಣಿಗೆಗಳು, ಆಫ್ಘಾನಿಸ್ತಾನಕ್ಕೆ ನೆರವು ಮುಂದುವರಿಕೆ ವಿಷಯಗಳನ್ನೂ ಚರ್ಚಿಸಿರುವ ಇಬ್ಬರೂ ನಾಯಕರು, ಆರ್ಥಿಕ ಮತ್ತು ಪ್ರಾದೇಶಿಕ ಭದ್ರತಾ ಆದ್ಯತೆಗಳ ಕುರಿತು ಸಹಕಾರ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕೆನ್‍, ಕೋವಿಡ್ ವಿರುದ್ಧ ಹೋರಾಟಕ್ಕೆ ಭಾರತ-ಅಮೆರಿಕ ಒಂದಾಗಿವೆ. ಪ್ರಾದೇಶಿಕವಾಗಿ ಮತ್ತು ವಿಶ್ವಾದ್ಯಂತದ ಅನೇಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆಯಲ್ಲಿ ಕ್ವಾಡ್‍ ಮತ್ತು ಇತರ ಸಂಸ್ಥೆಗಳ ಮೂಲಕ ಎರಡೂ ದೇಶಗಳು ನೇರವಾಗಿ ಒಟ್ಟಾಗಿ ಪಾಲುದಾರಿಕೆ ವಹಿಸಲಿವೆ ಎಂದು ಹೇಳಿದರು.

‘ಅನೇಕ ವರ್ಷಗಳಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಸದೃಢವಾಗಿ ಬೆಳೆದಿವೆ. ಇವು ಹೀಗೆಯೇ ಮುಂದುವರಿಯುವ ವಿಶ್ವಾಸವಿದೆ. ದೊಡ್ಡ ಸವಾಲು ಎದುರಾಗಿರು ಈ ಸಂದರ್ಭದಲ್ಲಿ ಅಮೆರಿಕ ಆಡಳಿತ ಬೆಂಬಲಕ್ಕೆ ನಿಂತಿರುವುದು ಮತ್ತು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು  ಜೈಶಂಕರ್ ಅವರನ್ನು ಉಲ್ಲೇಖಿಸಿ ಅಮೆರಿಕ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ಹೇಳಿದೆ.

ಕೋವಿಡ್ ಕಷ್ಟಕಾಲದಲ್ಲಿ ಭಾರತ ಮಾಡಿದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ: ಬ್ಲಿಂಕೆನ್
ಇದೇ ವೇಳೆ ಮಾರಕ ಕೋವಿಡ್ 19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ ಎದುರಿಸುತ್ತಿರುವ ಅತಿದೊಡ್ಡ ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಭಾರಿ ಬೆಂಬಲ ಹಾಗೂ ಅನುಕಂಪ ವ್ಯಕ್ತಪಡಿಸಿರುವ ಜೋ ಬೈಡನ್ ಆಡಳಿತಕ್ಕೆ ಜೈಶಂಕರ್ ಧನ್ಯವಾದ ಸಲ್ಲಿಸಿದರು. ಅಂತೆಯೇ ಕೋವಿಡ್ ಆರಂಭ ಕಾಲದಲ್ಲಿ  ಅಮೆರಿಕ ಸಂಕಷ್ಟಗಳನ್ನು ಎದುರಿಸಿದ ಸಂದರ್ಭದಲ್ಲಿ ಭಾರತ ಮಾಡಿದ ಸಹಾಯಗಳನ್ನು ತಮ್ಮ ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. 'ಈಗ ನಾವು ಭಾರತದೊಂದಿಗೆ ಇದ್ದೇವೆ ಎಂಬುದನ್ನು ಖಾತರಿಪಡಿಸಲು ಬಯಸುತ್ತೇವೆ. ನಮ್ಮ ಕಾಲದ ಅನೇಕ ಮಹತ್ವದ ಸವಾಲುಗಳ ಕುರಿತು ಅಮೆರಿಕ ಮತ್ತು  ಭಾರತ ಜಂಟಿಯಾಗಿ ಕೆಲಸ ಮಾಡುತ್ತಿವೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಾವು ಜತೆಯಾಗಿದ್ದೇವೆ. ಭಾರತ ಮತ್ತು ಅಮೆರಿಕಗಳ ಪಾಲುದಾರಿಗೆ ಅತ್ಯಂತ ಮಹತ್ವದ, ಗಟ್ಟಿಯಾದ ಮತ್ತು ಹೆಚ್ಚು ಫಲದಾಯಕವಾಗುತ್ತಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಭಾರತ-ಚೀನಾ ಗಡಿ ವಿವಾದ ವಿಚಾರ ಪ್ರಸ್ತಾಪ
ಅಂತೆಯೇ 'ಪ್ರಾದೇಶಿಕ ಭದ್ರತೆ, ಅಮೆರಿಕದಿಂದ ಕೋವಿಡ್‌ ಪರಿಹಾರ ಪ್ರಯತ್ನಗಳು, ಭಾರತ–ಚೀನಾ ಗಡಿ ಪರಿಸ್ಥಿತಿ ಮತ್ತು ಅಫ್ಘಾನಿಸ್ತಾನಕ್ಕೆ ಸಹಕಾರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಜೈಶಂಕರ್‌ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿಷಯಗಳ ಬಗ್ಗೆ ಉಭಯ ರಾಷ್ಟ್ರಗಳು ಜಂಟಿಯಾಗಿ ಕೆಲಸ ಮಾಡಲಿವೆ ಎಂದು ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ. 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಜೈ ಶಂಕರ್, ದ್ವಿಪಕ್ಷೀಯ ಸಹಕಾರ ಮತ್ತು ಪ್ರಾದೇಶಿಕ, ಜಾಗತಿಕ ವಿಷಯಗಳ ಕುರಿತು ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ನಾವು ಈ ವೇಳೆ ಇಂಡೋ-ಫೆಸಿಫಿಕ್, ಕ್ವಾಡ್‌, ಅಫ್ಘಾನಿಸ್ತಾನ, ಮ್ಯಾನ್ಮಾರ್‌, ಯುಎನ್‌ಎಸ್‌ಸಿ ಮತ್ತು ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆಯೂ ಮಾತುಕತೆ ನಡೆಸಲಾಯಿತು. ಲಸಿಕೆ ಪೂರೈಕೆ ಹೆಚ್ಚಿಸುವಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವದ ಕುರಿತಾಗಿಯೂ ಚರ್ಚೆ ನಡೆಸಲಾಯಿತು. ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ ಜೈಶಂಕರ್ ಅವರು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿ ಮಾಡಿದರು. ಉಭಯ ದೇಶಗಳ ನಡುವೆ ಮತ್ತಷ್ಟು ಯುದ್ಧತಂತ್ರ ಹಾಗೂ ರಕ್ಷಣಾ ಪಾಲುದಾರಿಕೆ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಿದರು. ಜತೆಗೆ ಸಮಕಾಲೀನ ಭದ್ರತಾ ಸವಾಲುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT