ದೇಶ

ಕೊರೋನಾದ ಈ ಸಂಕಷ್ಟ ಕಾಲದಲ್ಲೂ ನಮ್ಮ ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆ: ಪ್ರಧಾನಿ ನರೇಂದ್ರ ಮೋದಿ 

Sumana Upadhyaya

ನವದೆಹಲಿ: ಈ ಕೊರೋನಾ ಸೋಂಕಿನ ಸಂಕಷ್ಟ, ಲಾಕ್ ಡೌನ್ ನ ಸಮಯದಲ್ಲಿಯೂ ನಮ್ಮ ರೈತರು ದಾಖಲೆಯಲ್ಲಿ ಬೆಳೆ ಬೆಳೆದಿದ್ದಾರೆ. ಹಲವು ಕಡೆಗಳಲ್ಲಿ ರೈತರಿಗೆ ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರ ರೈತರಿಗೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಇಂದು ಹೇಳಿದ್ದಾರೆ.

ಕಿಸಾನ್ ರೈಲು ನೂರು ಕೆಜಿಗಳಿಂದ ಕ್ವಿಂಟಾಲ್ ಗಟ್ಟಲೆ ವಿಜಿಯನಗರಂ ಮಾವುಗಳನ್ನು ದೆಹಲಿಗೆ ಪೂರೈಸುತ್ತಿದೆ. ಇದರಿಂದ ದೇಶಾದ್ಯಂತ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದುವರೆಗೆ ಕಿಸಾನ್ ರೈಲು ಸುಮಾರು 2 ಲಕ್ಷ ಟನ್ ಮಾವು ಉತ್ಪಾದನೆಯನ್ನು ಪೂರೈಸಿದೆ ಎಂದರು.

ಈ ವರ್ಷ ಬಿಹಾರದಿಂದ ಶಶಿ ಲೀಚಿ ಹಣ್ಣನ್ನು ಲಂಡನ್ ಗೆ ವಿಮಾನದಲ್ಲಿ ಕಳುಹಿಸಲಾಗಿದೆ. 2018ರಲ್ಲಿ ಸರ್ಕಾರ ಇದಕ್ಕೆ ಜಿಐ ಟ್ಯಾಗ್ ನ್ನು ನೀಡಿತ್ತು. ಈ ಮೂಲಕ ಅದರ ಗುರುತು ಹೆಚ್ಚಾಗಿ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದರು.

ಕೋವಿಡ್ ಸಂಕಷ್ಟ ಸಮಯದಲ್ಲಿ ರೈತರು ಕಷ್ಟಪಟ್ಟು ಬೆಳೆ ಬೆಳೆಯುವುದರಿಂದ ನಾವೆಲ್ಲಾ ಊಟ ಮಾಡುತ್ತಿದ್ದೇವೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿಯೂ ನಮ್ಮ ರೈತರು ದಾಖಲೆಯ ಬೆಳೆಯನ್ನು ಉತ್ಪಾದಿಸಿದ್ದಾರೆ. ಅಲ್ಲದೆ ಸಾಕಷ್ಟು ಸಂಗ್ರಹಣೆಯನ್ನು ಕೂಡ ಮಾಡಿದ್ದೇವೆ ಎಂದರು.

SCROLL FOR NEXT