ದೇಶ

ಉಪ ಅಡ್ಮಿರಲ್ ಆರ್ ಹರಿಕುಮಾರ್ ನೌಕಾಪಡೆಯ ಮುಂದಿನ ಮುಖ್ಯಸ್ಥ

Srinivas Rao BV

ನವದೆಹಲಿ: ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಲಿದ್ದು, ಉಪ ಅಡ್ಮಿರಲ್ ಆರ್ ಹರಿ ಕುಮಾರ್ ನೌಕಾಪಡೆಯ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.

ಉಪಅಡ್ಮಿರಲ್ ಕುಮಾರ್ ಅವರು ಈಗ ವೆಸ್ಟ್ರನ್ ನೌಕಾ ಕಮಾಂಡ್ ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

"ಸರ್ಕಾರ ಅಡ್ಮಿರಲ್ ಆರ್ ಹರಿ ಕುಮಾರ್ ಅವರನ್ನು ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ನ.30 ರ ಮಧ್ಯಾಹ್ನದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ದಕ್ಷಿಣ ಕಮಾಂಡ್ ನ ಕಮಾಂಡಿಂಗ್-ಇನ್-ಚೀಫ್ ಆಗಿರುವ ಉಪ ಅಡ್ಮಿರಲ್ ಅನಿಲ್ ಕುಮಾರ್ ಚಾವ್ಲಾ ಅಡ್ಮಿರಲ್ ಸಿಂಗ್ ಅವರ ಬಳಿಕ ಸೇವಾ ಹಿರಿತನ ಹೊಂದಿರುವ ಅಧಿಕಾರಿಯಾಗಿದ್ದಾರೆ. ಆದರೆ ಅವರೂ ನ.30 ಕ್ಕೆ ನಿವೃತ್ತರಾಗುತ್ತಿರುವ ಕಾರಣದಿಂದಾಗಿ ಹರಿ ಕುಮಾರ್ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1962 ರ ಏಪ್ರಿಲ್ 12 ರಂದು ಜನಿಸಿದ ಉಪ ಅಡ್ಮಿರಲ್ ಕುಮಾರ್ ಅವರು 1983 ರ ಜ.1 ರಂದು ಸೇವೆಗೆ ಸೇರ್ಪಡೆಯಾಗಿದ್ದರು.  ಐಎನ್ ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್ಎಸ್ ಕೋರಾ, ಗುರಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ರಣವೀರ್ ಗಳಲ್ಲಿ ಕಾರ್ಯನಿರ್ವಹಿಸಿರುವ ಕುಮಾರ್ ಅವರು ಅಪಾರ ಅನುಭವ ಹಾಗೂ ಹಿಡಿತವನ್ನು ಹೊಂದಿದ್ದಾರೆ.

SCROLL FOR NEXT