ಸಾಂದರ್ಭಿಕ ಚಿತ್ರ 
ದೇಶ

ಇಸ್ಪೀಟ್ ಅಡ್ಡ ನಡೆಸುತ್ತಿದ್ದ ಖ್ಯಾತ ನಟನ ತಂದೆಯ ಬಂಧನ!

ಇಸ್ಪೀಟ್ ಅಡ್ಡ ನಡೆಸುತ್ತಿದ್ದ ಆರೋಪದ ಮೇರೆಗೆ ಖ್ಯಾತ ನಟನ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್: ಇಸ್ಪೀಟ್ ಅಡ್ಡ ನಡೆಸುತ್ತಿದ್ದ ಆರೋಪದ ಮೇರೆಗೆ ಖ್ಯಾತ ನಟನ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ಹೊರ ವಲಯದ ಮಂಚಿರೇವಾ ಪ್ರದೇಶದಲ್ಲಿ ನಡೆದಿದ್ದ ಇಸ್ಪೀಟ್ ಅಡ್ಡೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತೆಲುಗು ನಾಯಕ ನಟ ನಾಗಶೌರ್ಯ ಅವರ ತಂದೆ ಶಂಕರ್ ಪ್ರಸಾದ್ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ಅವರನ್ನು ನರಸಿಂಗಡಿ ಪೊಲೀಸರು ಉಪ್ಪಾರಪಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಪೊಲೀಸ್ ಮೂಲಗಳ ಪ್ರಕಾರ, 'ಶಂಕರ್ ಪ್ರಸಾದ್ ಅವರು ಕ್ಯಾಸಿನೊ ಕಿಂಗ್‌ಪಿನ್ ಗುಟ್ಟಾ ಸುಮನ್ ಜೊತೆ ಇಸ್ಪೀಟ್ ಆಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ತಾವು ಪುರಾವೆಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ಈ ಬಂಧನದೊಂದಿಗೆ ಮಂಚಿರೇವಾ ಫಾರ್ಮ್ ಹೌಸ್ ಪೋಕರ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಗುಟ್ಟಾ ಸುಮನ್ ಅವರನ್ನೇ ಕಿಂಗ್‌ಪಿನ್ ಎನ್ನಲಾಗುತ್ತಿತ್ತು. ಆದರೆ ಶಂಕರ್ ಪ್ರಸಾದ್ ಬಂಧನದೊಂದಿಗೆ ಮತ್ತೋರ್ವ ಕಿಂಗ್ ಬಂಧನವಾದಂತಾಗಿದೆ ಎನ್ನಲಾಗಿದೆ.  

ಪಿಡಿ ಕೇಸ್ ದಾಖಲು
ಇನ್ನು ತೆಲಂಗಾಣ ಅಪರಾದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪಿಡಿ ಕಾಯ್ದೆ (ಅಪಾಯಕಾರಿ ಚಟುವಟಿಕೆಗಳ (ಪಿಡಿ) ನಿಯಂತ್ರಣ ಕಾಯ್ದೆ)ಯಡಿ ಕೇಸ್ ದಾಖಲಾಗಲಿದೆ. ಇನ್ನು ಈ ಪ್ರಕರಣದಲ್ಲಿ ಈ ವರೆಗೂ 30ಮಂದಿಯನ್ನು ಬಂಧಿಸಲಾಗಿದ್ದು, ಈ ಬಂಧಿತ 30 ಮಂದಿ ಹೈದರಾಬಾದ್ ನ ದೊಡ್ಡ ಕುಳಗಳೆಂದು ಹೇಳಲಾಗಿದೆ. ಎಲ್ಲರೂ ಶ್ರೀಮಂತ ವ್ಯಕ್ತಿಗಳಾಗಿದ್ದು, ಮಾಜಿ ಶಾಸಕರು, ಕಾರ್ಪೋರೇಟರ್ ಗಳು, ಉದ್ಯಮಿಗಳು ಸೇರಿದ್ದಾರೆ ಎನ್ನಲಾಗಿದೆ.  ಇನ್ನು ದಾಳಿ ವೇಳೆ ಅಪಾರ ಪ್ರಮಾಣದ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದಲ್ಲದೇ ಹಣ ಎಣಿಸುವ ಮಷಿನ್ ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. 

ಈ ಇಸ್ಪೀಟ್ ಅಡ್ಡೆ ಆಯೋಜನೆ ವೇಳೆ ದೊಡ್ಡ ಮಟ್ಟದ ಎಣ್ಣೆ ಪಾರ್ಟಿ, ಭೋಜನ ಕೂಟ ಕೂಡ ಇತ್ತು ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT